STORYMIRROR

ಹೃದಯ ಸ್ಪರ್ಶಿ

Romance Classics Others

4  

ಹೃದಯ ಸ್ಪರ್ಶಿ

Romance Classics Others

ಹೊಂಗನಸು

ಹೊಂಗನಸು

1 min
492

#lovelanguage


ಕಾಡೋ ಕನಸುಗಳಿಗೆಲ್ಲಾ

ನಿನ್ನ ಹೆಸರಿಟ್ಟು ನಿದ್ದೆಗೆ ಜಾರಿಬಿಡಲೇ?

ಕಣ್ಬಿಟ್ಟಾಗ ಮತ್ತೆ ನಿನ್ನನ್ನೇ 

ನೋಡುವ ಭರವಸೆಯೊಂದಿಗೆ!


ಕನಸಿನ ನಡುವೆಯೂ ಕಾಡೋ ನೆನಪಿಗೆ

ಬೆಳಕಿನ ಶೃಂಗಾರ ಮಾಡಿಬಿಡಲೇ? 

ಪಡುವಣದಿ ಜಾರಿದ ರವಿಯೂ

ಮತ್ತೆ ಮೂಡಣದಿ ಹಾಜರಾದಂತೆ

ಹೊಚ್ಚ ಹೊಸ ಜೀವನ

ನೋಡುವ ಕನಸಿನೊಂದಿಗೆ!


ನೂರು ನಿರೀಕ್ಷೆಗಳ ದಾರಿಯಲಿ

ಸುಳಿಯೋ ಕನಸಿಗೆ..

ಕುದುರೆಯ ಅಂಕುಶವ ಹಾಕಿ ಬಿಡಲೇ?

ನೂರು ಏಟಿನ ಕಹಿ ನೆನಪುಗಳ ಜೊತೆಗೆ!


ಲಗುಬಗೆಯಲಿ ಹಕ್ಕಿಯಂತೆ ಗೂಡು

ಸೇರ ಹೊರಟ ಕನಸನ್ನು ತಡೆದು ನಿಲ್ಲಿಸಲೇ?

ಹೊಸ ಕನಸ ಪೋಣಿಸುವ ಸಲುವಾಗಿ

ಒಲವ ಮುನ್ನುಡಿಗೆ!


ಕನಸುಗಾರನ ಹೊಸ ಕನಸಿಗೆ 

ನಾಂದಿ ಹಾಡಲೇ?

ಬಣ್ಣ ಬಣ್ಣದ ಕನಸಿಗೆ ಹೊಸ ರಂಗಾಗಿ

ಕನಸುಗಳ ಚಿತ್ರ ಬಿಡಿಸೋ ಕುಂಚವು ನಾನಾಗಿ

ಪ್ರತಿ ಕ್ಷಣವೂ ಜೊತೆಗಿರೋ ಆಶಯಕ್ಕೆ! 



Rate this content
Log in

Similar kannada poem from Romance