Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

ಹೃದಯ ಸ್ಪರ್ಶಿ

Drama Romance Children

4.5  

ಹೃದಯ ಸ್ಪರ್ಶಿ

Drama Romance Children

ಕುಟುಂಬ

ಕುಟುಂಬ

1 min
228


ಬರುವಾಗಲೂ ಒಂಟಿ

ಹೋಗುವಾಗಲೂ ಒಂಟಿ

ನಡುವೆ ಈ ಮೂರು ದಿನದ

ಬದುಕಿನಲಿ ಹಾಕಬೇಕಿದೆ ಮನಸು

ಮನಸುಗಳ ನಡುವೆಯೊಂದು ಜಂಟಿ


ಸುಂದರ ಮನಸ್ಸುಗಳ

ಸಾಮರಸ್ಯದ ಜೀವನ ಎಲ್ಲಿಯೋ

ಅಲ್ಲಿಯೇ ಕುಟುಂಬ

ಮನೆ ಮನಸ್ಸುಗಳ ನಡುವಿನ

ನಿರ್ಮಲ ಸ್ವಚ್ಛ ಭಾವವೇ ಕುಟುಂಬ


ಏನೆಂದು ಬಣ್ಣಿಸಲಿ 

ಮರೆಯಲಾಗದ ಈ ಭಾವ

ಬಂಧು ಬಾಂಧವರ ಒಡನಾಟ

ಹೇಳದೆಯೂ ಅರಿತುಕೊಳ್ಳುವ

ಮನದ ಮಾತುಗಳ ಈ ಪರಿಪಾಠ!


ಅಜ್ಜ ಅಜ್ಜಿ ಅತ್ತೆ ಮಾವ ಎಂಬ

ಈ ಒಡನಾಡಿ ಬಾಂಧವ್ಯ

ಅಪ್ಪ ಅಮ್ಮನ ಮಮತೆಯ ಜೊತೆಯಲಿ

ಚಿಕ್ಕಪ್ಪ ಆಂಟಿಯ ಜೊತೆ ತರಳೆ ತುಂಟಾಟ..?

ಹೇಗೆ ಮರೆಯಲಿ ಆ ಸುಂದರ ಸವಿ 

ನೆನಪುಗಳ ಮೇಳ..?

ಬಾಳಿನುದ್ದಕ್ಕೂ ಹರಿದು ಬರುವ

ಈ ನಿಷ್ಕಲ್ಮಶ ಮುಗುಳ್ನಗೆಯ!


Rate this content
Log in

Similar kannada poem from Drama