ಬದಲಾಗು ಮನವೇ..
ಬದಲಾಗು ಮನವೇ..
ಕುಗ್ಗದಿರು ಮನವೇ
ಬದಲಾಗು..
ಮೌನದಲ್ಲೂ ಗೆಲ್ಲುವ
ಸಾಹಸ ಬೆಳೆಸಿಕೋ..
ನಿರಂತರ ಈ ಪಯಣ
ನಿಲ್ಲದು ನದಿಯಂತೆ,
ಸೇರುವ ಸಾಗರವದು
ಅನಂತ..
ಸೋಲಿರಲಿ ಗೆಲುವಿರಲಿ
ಕುಗ್ಗದೆ ಹಿಗ್ಗದೆ
ನಡೆ ಮುಂದೆ ನಿಲ್ಲದೆ
ಮುಗುಳ್ನಗುವಿರಲಿ
ಅಧರಗಳಲಿ ಮಾಸದೆ
ಬೀಸುವ ತಂಗಾಳಿ
ಹರಡಿರೋ ಬೆಳಕು
ಯಾವುದಕ್ಕೂ
ತಡೆಯಿಲ್ಲ, ನಿನ್ನಂತೆ
ಮತ್ತೆ ನೀನ್ಯಾಕೆ ನಿನ್ನ
ನೀನೇ ಬಂಧಿಸುವೆ
ಇಲ್ಲದ ಯೋಚನೆಗಳ
ಬಂಧನದಲ್ಲಿ..?!
ಬದಲಾಗು ಮನವೇ
ಬದಲಾಗಿದೆ ಕಾಲ,
ಬದಲಾಗಿದೆ ಸಮಾಜ
ನೀನಷ್ಟೇ ಉಳಿದಿರುವೆ
ಅದೇ ಹಿಂದಿನ
ಸಂಕೋಲೆಗಳಲ್ಲಿ..!!
