STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಕನ್ನಡ ತರಂಗಿಣಿ

ಕನ್ನಡ ತರಂಗಿಣಿ

1 min
242


ಕರುನಾಡ ಕಲ್ಯಾಣಿ

ಕನ್ನಡದ ವಾಣಿ

ಜನಪದ ವಿಹಾರಿಣಿ

ಸುಮಧುರ ಭಾಷಿಣಿ


ಗದ್ಯ ಪದ್ಯ ಚಂಪೂ

ಕಂದ ತ್ರಿಪದಿ ಚೌಪದಿ

ಷಟ್ಪದಿ ಅಕ್ಕರಗಳಾ

ಸಾಂಗತ್ಯಚಾರಿಣಿ


ಖ್ಯಾತ ಕರ್ಣಾಟಕಗಳಾ

ಛಂದೋ ವಿಹಾರಿಣಿ

ನವರಸಾಲಂಕಾರ

ಶಬ್ದಾರ್ಥ ಶೋಭಿಣಿ


ಪಂಪರನ್ನ ಕವಿವರರಾ

ಮಾರ್ಗಕಾವ್ಯಭೋದಿನಿ

ಕುವರವ್ಯಾಸ ಲಕುಮೀಶ

ರಾಘವರ ಷಟ್ಪದಿ ವಿಲಾಸಿನಿ


ಹರಿದಾಸ ಪಂಥಗಳಾ

ಹರಿಭಕ್ತಿ ವಾಹಿನಿ

ವಚನ ವರೇಣ್ಯರಾ

ಅನುಭಾವಿಕ ಭಾಷಿಣಿ


ನವ ಅರುಣೋದಯದಾ

ನವ ಭಾವ ತರಿಂಗಿಣಿ

ನವ್ಯಾತಿನವ್ಯಗಳಾ

ಪ್ರಗತಿಪಥ ಚಾರಿಣಿ


ದೇಸಿ ಮಾರ್ಗಗಳಾದಿ

ಜಾನಪದ ಸಂಚಾರಿಣಿ

ಕರುನಾಡ ಗೀರ್ವಾಣಿ

ಕನ್ನಡದ ವಾಣಿ


ಜಯತು ಕನ್ನಡ ತಾಯಿ

ಜಯತು ಕನ್ನಡ ಮಾತೆ

ಜಯ ಜಯತು ಗೀರ್ವಾಣಿ

ಜಯತು ಕರುನಾಡ ವಾಣಿ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract