STORYMIRROR

Vijaya Bharathi

Abstract Classics Inspirational

4  

Vijaya Bharathi

Abstract Classics Inspirational

. ಆಷಾಢ

. ಆಷಾಢ

1 min
72


ಅತಿದೀರ್ಘ ಆಷಾಢ ಮುಗಿಯುವುದು ಎಂದೋ ?

ಅಗಲಿದಾ ನವವಧೂವರರ ಸವಿಮಾತ ಕೇಳುವುದು ಎಂದೋ?


ಮಾರುತನ ಕೋಪದಲಿ ಕುಗ್ಗಿದಾ ಸಸ್ಯಸಿರಿ

ಮತ್ತೆ ಸಸ್ಯಶ್ಯಾಮಲೆಯಾಗುವುದು ಎಂದೋ?


ಶೂನ್ಯಮಾಸದ ಮಸಣ ಮೌನವು ಕರಗೆ

ಮಂಗಳ ನಿನಾದವನು ಕೇಳುವುದು ಎಂದೋ?


ದಿನವೊಂದು ಯುಗವಾದ 

ಅತಿದೀರ್ಘ ಆಷಾಢ ಮುಗಿಯುವುದು ಎಂದೋ?


ಮನದ ಮಬ್ಬಿನ ಮಸುಕ ತೆರೆಯಿಸುವ

ನಿರೀಕ್ಷೆಯಲಿ ನಿಂತವರ ಕಾತರವ ಕಳೆಯಿಸುವ

ಶ್ರಾವಣನ ಆಗಮನ ಇನ್ನೆಂದಿಗೋ?





ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract