ಪ್ರಾರ್ಥನೆ
ಪ್ರಾರ್ಥನೆ
ವಿಶ್ವಧರ್ಮ ಸ್ವರೂಪಾಯ ವಿಶ್ವಚೈತನ್ಯಮೂರ್ತಯೆ
ವಿಶ್ವರೂಪ ಮಹಾತೇಜ ವಿಷ್ಣವೇ ಪ್ರಭವಿಷ್ಣವೇ
ವಿಶ್ವ ಚೇತನ ನಿನ್ನ ಚೈತನ್ಯಕೆ ನಮನ
ವಿಶ್ವ ಮೂರುತಿ ನಿನ್ನ ಅಡಿಗಳಿಗೆ ನಮನ
ವಿಶ್ವವ್ಯಾಪಿಯೇ ಆಗಿ ತುಂಬಿರುವೆ ಎಲ್ಲೆಲ್ಲೂ
ವಿಶ್ವರೂಪನೆ ನಿನಗೆ ಅನುನಯದಿ ವಂದಿಸುವೆ
ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು
ವಿಶ್ವಾತ್ಮನೆ ನಿನ್ನ ಅಡಿಗಳಿಗೆ ವಂದಿಸುವೆ