ರಜತಗಿರಿಯಡಿಯಲ್ಲಿ
ರಜತಗಿರಿಯಡಿಯಲ್ಲಿ


ರಜತಗಿರಿಯಡಿಯಲ್ಲಿ
ಕಣ್ಮನಗಳಾ ತಣಿಪ
ಹಿಮಗಿರಿಯ ಶಿಖರಗಳು
ಇವುಗಳೇಂ
ವಿಶ್ವಕರ್ಮನ
ವಿಸ್ಮಯಗಳೋ?
ಉತ್ತರಾಖಂಡದಾ
ಊರ್ಧ್ವಗಾಮಿಗಳೋ?
ದಿವಿ ಭುವಿಯ
ಸೇತುವೆಗಳೋ?
ವ್ಯೋಮಕೇಶನ
ಕಂಠಾಭರಣಗಳೋ?
ಧೂರ್ಜಟಿಯ
ಜಟಾಜೂಟಗಳೋ?
ದೇವಭೂಮಿಯ
ದಿವ್ಯ ಚಿತ್ತಾರಗಳೋ?
ದೇವಗಂಗೆಯ
ಭವ್ಯ ವೇದಿಕೆಯೋ?
ವರ್ಣನೆಗೆ ನಿಲುಕದಾ
ಹರಿಹರರಾ ಈ ವಿಭೂತಿ
ಇದೊಂದು ದಿವ್ಯಾನುಭೂತಿ