ಚಿಗುರದ ಆಸೆ
ಚಿಗುರದ ಆಸೆ


ಎನಗಿಲ್ಲ ನಿಮ್ಮಂತೆ
ಹುಟ್ಟಿ ಸಾಯುವಾಸೆ
ಹುಟ್ಟಿದರೆ ಹಲವರ
ನೆನಪಲ್ಲುಳಿಯುವಾಸೆ
ಕೀರ್ತಿವಂತ ಮೇಧಾವಿ
ದಿಗ್ಗಜ ಕವಿಪುಂಗವರ
ಕಲ್ಪನೆಯ ಕೂಸಾಗುವ
ಎನ್ನ ಮನದಾಳದಾಸೆ
ಬಿಟ್ಟು ಬಿಡಿ ಎನ್ನ
ನನಗಿಲ್ಲ ಹೀಗೆ
ಕಲ್ಪನೆಗೂ ಎಟುಕದ
ಕೂಸಾಗುವಾಸೆ
ಭಾವನೆಗೆ ಬೆಲೆ ಕೊಟ್ಟು
ಎನ್ನ ಮನನೊಂದು
ನಿನ್ನೀಗಲೇ ಬಿಟ್ಟು
ಕಳುಹಿಸುವಾಸೆ