STORYMIRROR

Surabhi Latha

Abstract Classics Others

4  

Surabhi Latha

Abstract Classics Others

ಕವಿತೆ

ಕವಿತೆ

1 min
570

ಕರಗುತಿದೆ ಮಂಜಿನ ಹನಿ 

ಸುತ್ತಲೂ ಕೇಳುತಿದೆ ನಿನ್ನದೇ ದನಿ 

ನೀ ಇರದಿರಲು ನನ್ನ ಸನಿಹ 

ತನುವಲ್ಲಿ ನಿನ್ನದೇ ವಿರಹ


        ಎಲ್ಲೇ ಇರು ನೀನು 

        ಹೇಗೇ ಇರು ನೀನು 

        ನಿನಗಾಗಿ ಕಾಯುವೆ ನಾನು 


ಏನೇ ಹೇಳಲಿ ಮನವು 

ಒಡೆದರೇನು ಎದೆಯು 

ನಿನಗಾಗಿ ಕಾಯುವೆ ನಾನು 


     ಕನಸು ಮುರಿದರೇನು 

     ಒಡಲು ಬೆಂದರೇನು 

    ನಿನಗಾಗಿ ಕಾಯುವೆ ನಾನು 


ಕಣ್ಣ ಹನಿ ಉಪ್ಪು 

ತರುತಿರಲು ಮುಪ್ಪು 

ನಿನಗಾಗಿ ಕಾಯುವೆ ನಾನು 


     ನೀ ಅರಿಯಲಾರೆ ಈ ಭಾಧೆ 

     ನೊಂದು ಸೋತು ಹೋದೆ 

     ಆದರು ಕಾಯುವೆ ನಿನಗಾಗಿ ನಾನು 


ಕೊನೆಗೆ ಒಂದು ದಿನ 

ಸೋಲಿಸುವೆ ಆ ವಿಧಿಯನ್ನ 

ಕೂಡುವೆ ನಾನು ನಿನ್ನ 


     ನಲಿವೆ ಹಕ್ಕಿಯಂತೆ ಆ ದಿನ 

     ಮರೆವೆ ನೊಂದ ಕ್ಷಣಗಳನ್ನ 

     ಕಾಯುವೆ ಆ ಸಮಯವನ್ನ 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract