ಕೇಳು ನಿನ್ನೆದೆಯ ಕರೆಯ
ಕೇಳು ನಿನ್ನೆದೆಯ ಕರೆಯ
ನಿನಗಾಗಿ ಬದುಕಿನ್ನು
ಬಾಳು ನಡೆಸಾಗಿದೆ ತಂದೆ ತಾಯಿಗೆ, ಗಂಡನಿಗೆ ಅತ್ತೆ ಮಾವರಿಗೆ,
ಮಕ್ಕಳು ಮರಿಗಳಿಗೆ ಸಂಸಾರಕ್ಕೆ ಇನ್ನಾದರೂ ಬದುಕು ನಿನಗಾಗಿ
ಕೇಳಾಯಿತು ಎಲ್ಲರ ಇಷ್ಟ ಗಳು, ನೆರವೇರಿಸಲು ಅವರ ಕನಸುಗಳು ,
ಸವೆದಿದ್ದಾಯಿತು ಒಳ್ಳೆಯ ದಿನಗಳು ಇನ್ನಾದರೂ ಬದುಕು ನಿನಗಾಗಿ
ಅಮ್ಮ ಅಪ್ಪನ ಕನಸುಗಳು ಈಡೇರಿಸಲು ಸಮಯ ಕೊಟ್ಟಾಯಿತು,
ಮಕ್ಕಳ ಆಸೆಗಳಿಗಂತೂ ಎಣೆ ಇಲ್ಲದಾಯಿತು,
ಇನ್ನಾದರೂ ಸಮಯ ಕೊಡು ನಿನಗಾಗಿ
ಹಣವನು ಕೂಡಿಟ್ಟು ಗಂಟು ಮಾಡಾಯಿತು.
ಮಕ್ಕಳ ಭವಿಷ್ಯ ಕ್ಕಾಗಿ ,ಅವರ ಓದು ಮದುವೆಗಾಗಿ
ಇನ್ನಾದರೂ ಜೋಡಿಸು ನಿನ್ನ ಮುದಿತನದ ದಿನಕ್ಕಾಗಿ
ದೂರ ಬಲು ದೂರ ಓಡಿದ್ದೇ ಆಯಿತು
ಓದಿನ ಹಿಂದೆ.ಬಸ್ಸಿನ ಹಿಂದೆ ಕೆಲಸಗಳ ಹಿಂದೆ
ಇನ್ನಾದರೂ ಓಡು ನಿನ್ನ ಆರೋಗ್ಯದ ಉಳಿವಿನಿಂದೆ
ಸಂತಸ ಹುಡುಕಿದ್ದಾಯಿತು ಬಂಧು ಬಾಂಧವರೆಡೆ
ಅಕ್ಕ ಪಕ್ಕದವರ ಕಡೆ, ಎಷ್ಟು ಮಾಡಿದರೂ ತೃಪ್ತಿ ಯ ಕೊಡ ತುಂಬಿಸಲಾರೆ
ಇನ್ನಾದರೂ ಸಂತಸ ಹುಡುಕು ನಿನಗಾಗಿ
ಒಮ್ಮೆ ಯಾದರೂ ಚಿಂತೆ ಕಾಡಿದೆಯಾ ನಿನ್ನ
ನಿನ್ನಾಸೆ ಕನಸುಗಳು ನೆರವೇರಿಸಿಕೊಳ್ಳಲು ಕೊಟ್ಟೆಯ ಒಂದು ದಿನ?
ಇನ್ನಾದರೂ ಬದುಕು ನಿನಗಾಗಿ
ಕಸ ಗುಡಿಸಿಲ್ಲ ವೆಂದು,ಮುಸುರೆ ತೊಳೆದಿಲ್ಲವೆಂದು
ಅಡಿಗೆ ಮಾಡಿಲ್ಲವೆಂದು ಒತ್ತಡಗಳ ಬಿಸಿ ತಡೆದದ್ದಾಯಿತು,
ಚಿಂತಿಸು ನಿನ್ನ ಬೇಕು ಬೇಡಗಳ ಬಗೆಗೆ
ಬರೆದು ಬಿಡು ನಾಲ್ಕು ಸಾಲು ಏನಿದೆಯೊ ನಿನ್ನ ಭಾವನೆಗಳು,
ಇಷ್ಟವಿಲ್ಲದನ್ನು ಇನ್ನಾದರೂ ತಿರಸ್ಕರಿಸಿಬಿಡು,
ನಿನ್ನಾಸೆ ಕನಸುಗಳ ನೆರವೇರಿಸಿಬಿಡು
ಮುಚ್ಚಿಟ್ಟ ಪುಟ್ಟ ನಗೆಯ ಹೊರ ಎಳೆತು ತಂದಿಡು
ನಿನಗಾಗಿ ನೀನು ಬದುಕಲು ಸಮಯವನ್ನು ಕೊಡು
ಇನ್ನಾದರೂ ನೀನೂ ಮನುಷ್ಯ ಳೆಂಬ ಸತ್ಯ ಅರಿತುಕೊ
