ಕೇಳುವರು ಯಾರು?
ಕೇಳುವರು ಯಾರು?


ಸಮಯವೇ ನೋಡದೆ ದುಡಿದ
ಕೈಗಳು ಇಂದು ಬರಿದಾಗಿವೆ.
ಸಂಬಳವ ನಿರೀಕ್ಷಿಸದೆ ಮಾಡಿದ
ಕಾಯಕವು ಇಂದು ಇಲ್ಲದಂತಾಗಿದೆ.
ಮುರಿದ ಕೋಲು,
ಹರಿದ ಚೀಲ,
ಕೆದರಿದ ಕೂದಲು,
ಬಣ್ಣ ಮಾಸಿದ ಬಟ್ಟೆ,
ಊಟವಿಲ್ಲದೆ ಹಸಿದ ಹೊಟ್ಟೆ.
ಊರಲ್ಲದ ಊರಲ್ಲಿ ಅಲೆಮಾರಿ
ನಾನಾದೆ ಈ ದಿನ.
ನನ್ನವರು ಎಲ್ಲಿ?
ನಾ ಮಾಡಿದ ಉಪಕಾರವೆಲ್ಲಿ(!?),
ಹಣವೇ ಮುಖ್ಯವಿಲ್ಲಿ !
ಗುಣಕ್ಕೆ ಬೆಲೆ ಎಲ್ಲಿ?
ನೋಡುವರು ನನ್ನನ್ನ ಯಾರಿಲ್ಲಿ ?
ಕಾಣುವುದೆ ಅವರಿಗೆ ಹಸಿದಿರುವೆ ನಾನಿಲ್ಲಿ !