ಅವಳಿಲ್ಲದಿರೆ....
ಅವಳಿಲ್ಲದಿರೆ....
ಹಳೇ ದಾರಿಲಿ ಬೆಳಕಿಲ್ಲ ದಾಗ
ಹುಡುಕಲೇ ಬೇಕಾದ್ದು ಅವಶ್ಯ
ಹೊಸ ಹಾದಿ ಹುಡುಕುವಾಗ
ಅವಳ ನೆನೆಪು ಕ್ರಮೇಣ ಅಧೃಶ್ಯ
ಶಕ್ತಿ ಅನ್ನೋ ಅವಳಿದ್ದಾಗ
ತೆರೆದುಕೊಳ್ಳುತ್ತೆ ಹಲವು ದಾರಿ
ಅವಳಿಲ್ಲದಾಗ ಏನೂ ಬೇಡವಾಗಿ
ಇಲ್ಲವಾಗುತ್ತೆ ಜೀವನಕ್ಕೆ ಗುರಿ
ಯಾರ ಬೆಲೆ ನಮ್ಮಲ್ಲಿ ಇದ್ದಾಗ
ಅವರ ಬಗ್ಗೆ ಪೂರ್ಣ ತಿಳಿಯಲ್ಲ
ಹೋದಮೇಲೆ ಹಿಂದಿನದು ನೆನೆದು
ಸಂಕಟ ಪಡುವುದು ತರವಲ್ಲ