STORYMIRROR

Vaishnavi S Rao

Tragedy Classics Others

4  

Vaishnavi S Rao

Tragedy Classics Others

ಮನಸ್ಸು

ಮನಸ್ಸು

1 min
227


ಹೆಣ್ಣಿನ ಜೀವನ ಕಣ್ಣೀರಿನಲ್ಲಿ ಆಯಿತು

ಆಕೆಯ ಮನಸು ಮೃದುವಂತೆ ಕರಗಿತು 

ಆಕೆಯ ಜೀವನ ಪಯಣದಂತೆ ಆಯಿತು 

ಮುದ್ದು ಕನಸು ಆಕೆಯಲ್ಲೇ ಉಳಿಯಿತು


ಆಕೆಯ ಕಣ್ಣೀರಿನ ಹನಿಗಳು ಹಳ್ಳವಾಯಿತು

ಅತ್ತೆಯ ಪ್ರೀತಿ ಮಾತುಗಳು ಮುಳುವಾಯಿತು

ಅಮ್ಮನ ನುಡಿ ಮುತ್ತುಗಳು ನೆನಪಾಯಿತು

ಆಕೆಯ ಜೀವನ ಅಂತ್ಯ ಕೊನೆಯಾಯಿತು


ಹೆಣ್ಣಿನ ಕಷ್ಟವನ್ನು ಯಾರು ತಿಳಿಯುವವರು 

ಆಕೆಯ ಮನಸಿನ ಭಾವನೆಯ ಕೇಳುವವರು

ಆಕೆಯನ್ನು ಯಾರು ಯಾರು ಪ್ರೀತಿಸುವವರು

ಆಕೆಯ ಜೀವನ ಕ್ಷಣವನ್ನು ಮರೆಯುವವರು


ನಿನ್ನ ಬದುಕು ಇಂದು ಕೊನೆಯಿಲ್ಲ 

ಪಯಣಕ್ಕೆ ಎಂದಿಗೂ ಅಂತ್ಯವಿಲ್ಲ 

ಗೆಲುವು ಎಂಬ ನಿರಾಸೆ ನೆರವಿಲ್ಲ 

ಬಡವರ ಬವಣೆಯ ಕರುಣೆಯಿಲ್ಲ 


Rate this content
Log in

Similar kannada poem from Tragedy