ಪ್ರೀತಿಯ ಪರಿಣಾಮ!
ಪ್ರೀತಿಯ ಪರಿಣಾಮ!


ಕಾಲ ಕಳೆದಂತೆ ಮರೆಯಾಯಿತು ಪ್ರೀತಿ
ಮಾಯವಾಯಿತು ಮೋಹದ ಕಾಂತಿ
ಉಳಿದಿದ್ದು ಕೇವಲ
ಸಂಬಂಧಗಳಲ್ಲಿ ವ್ಯತ್ಯಾಸ
ವ್ಯರ್ಥದ ಅಭಿಮಾನ
ಮುಗಿಯದ ಅಹಂಭಾವ
ಬಿಡದಂತೆ ಅಂಟಿದ ದೇಹಗಳಂದು
ಬೇಪರ್ಟ್ಟಿದೆ ಮನಸುಗಳಿಂದು
ಹೆಚ್ಚುತ್ತಿರುವ ಹಗೆಗಳ ಜೊತೆಗೆ
ನಡೆಯುತಿದೆ ನಿಲ್ಲದ ಕಚ್ಚಾಟಗಳು
ಸ್ವಪ್ನದಲ್ಲೂ ಕಾಡುತ್ತಿದ್ದವರಂದು
ಎದುರೇ ಇದ್ದರೂ ಖುಷಿಯಿಲ್ಲ ಇಂದು
ಆಕರ್ಷಣೆ ಬಣ್ಣಕ್ಕೆ ಪ್ರೀತಿಯ ಹೆಸರು ಕೊಟ್ಟವರು
ಬಣ್ಣ ಕಳೆದುಕೊಳ್ಳುತ್ತಿದ್ದಂತೆ
ಹಂಬಲಿಸುತ್ತಿದ್ದಾರಿಂದು ಅಗಲಿಕೆಗೆ...
ಉಳಿದಿದೆಯಿಂದು ಪ್ರೀತಿ ಬರಿ ನಾಮ
ಹೆಚ್ಚಾಗಿ ನಾ ಕಂಡಂತೆಲ್ಲಾ ಆಗಿರೋದು
ಇದೇ ಪ್ರೀತಿಯ ಪರಿಣಾಮ...