ನಗು
ನಗು
ಸೂರಿಲ್ಲದೆ ಒದ್ದಾಡುತಿರುವವ ಕೆಲವರು
ಬಂಗ್ಲೆಯಲ್ಲಿದ್ದರೂ ಒಬ್ಬಂಟಿ ಹಲವರು
ಕೇಳುತಿರುವೆ ಇವರ ನೋವುಗಳನ್ನು ಅವುಡುಗಚ್ಚಿ
ವಿಶ್ವ ನಗುವಿನ ದಿನವಿಂದು ಹೇಗೆ ನಗಲಿ ಮನಸ್ಸು ಬಿಚ್ಚಿ
ಅನ್ನ ನೀರಿಲ್ಲದೆ ಕಂಗೆಟ್ಟಿರುವವರ ರೋಧನೆ
ಅನಾರೋಗ್ಯದಿಂದ ತಿನ್ನಲಾಗದ ಹಲವರ ವೇದನೆ
ಅಳುತಿದೆ ಮನವು ಕೊರಗು ಹಚ್ಚಿ
ವಿಶ್ವ ನಗುವಿನ ದಿನವಿಂದು ಹೇಗೆ ನಗಲಿ ಮನಸ್ಸು ಬಿಚ್ಚಿ
ಬಂಜೆಯಾದೆನೆಂಬ ಕೊರಗುವ ಹೆಣ್ಣಿನ ಸಂಕಟ
ಹೆತ್ತು ಹೊತ್ತು ಸಾಕಿದರೂ ವೃದ್ಧಾಶ್ರಮಕ್ಕೆ ತಳ್ಳುವ
ಮಕ್ಕಳ ಕಾಟ
ಇದೆಲ್ಲಾ ನೋಡಿಯೂ ಸುಮ್ಮನಿರುವನು ದೇವನು ಕಣ್ಣು ಮುಚ್ಚಿ
ವಿಶ್ವ ನಗುವಿನ ದಿನವಿಂದು ಹೇಗೆ ನಗಲಿ ಮನಸ್ಸು ಬಿಚ್ಚಿ
ಬದುಕು ಸೋಲು ಗೆಲುವು ಸುಖ ದುಃಖಗಳ ಧಾಮ
ನೋವು ನಲಿವಿನ ಜೊತೆಗಿರಲಿ ಒಂದಷ್ಟು ಪ್ರೀತಿ ಪ್ರೇಮ
ಪ್ರತಿಯೊಂದು ಹೃದಯದಲ್ಲೂ ಕರುಣೆಯೆಂಬ ದೀಪವ ಹಚ್ಚಿ
ವಿಶ್ವ ನಗುವಿನ ದಿನವೊಂದೇ ಅಲ್ಲ ಪ್ರತಿದಿನವೂ ನಗುವಂತೆ ಮಾಡು ಮನಸ್ಸು ಬಿಚ್ಚಿ