ಪ್ರಕೃತಿಯ ಮುನಿಸಿ
ಪ್ರಕೃತಿಯ ಮುನಿಸಿ


ಕ್ಷಮಯಾ ಧರಿತ್ರಿ ಎಂದು
ಭೂತಾಯ ಒಡಲ ಕೊರೆದೆ
ನಿನ್ನಾಣತಿಗೆ ಹರಿಯಲು ಬಿಟ್ಟೆ
ಇರುವ ನದಿಗಳ ಅಲ್ಲಲ್ಲಿ ತಡೆದೆ
ಗಗನವೇ ನಿನದೆಂದು ಬೀಗಿ
ಕಂಡ ಕಂಡಲ್ಲಿ ಹಾರಾಡಿದೆ
ಕಾನನದ ಪ್ರಾಣಿಗಳ ಕೂಡಿಟ್ಟು
ಮನಬಂದಂತೆ ನೀ ಮೆರೆದೆ
ಕರೇಯದೇ ಬಂದ ರಕ್ಕಸನ
ಅಟ್ಟಹಾಸಕೆ ಹೆದರಿದೆ
ಹೊರಬರಲು ಭಯದಿ
ಇಂದು ನೀ ಬಂಧಿಯಾದೆ