ಮುಟ್ಟು
ಮುಟ್ಟು


ಮುಟ್ಟಾದರೇಕೆ ಮುಟ್ಟಬಾರದು ನಿನ್ನ...
ಮುಟ್ಟಾಗುವೆಡೆಯಿಂದಲೇ ಹುಟ್ಟಿ ಬಂದವರಲ್ಲವೇ..?
ಗುಡಿ ಗೋಪುರಕೆ ಕರೆಯಬಾರದೇಕೆ ನಿನ್ನ..
ಅಲ್ಲಿರುವ ತಾಯಿಯೂ ನಿನ್ನ ಹಾಗೆ ಹೆಣ್ಣೇ ಅಲ್ಲವೇ..?
ಮನೆಯೊಳಗೆ ಕೂಡಬಾರದೇಕೆ ನಿನ್ನ...
ಒಳಗಿರುವ ನಿತ್ಯಕರ್ಮ ಕೊಠಡಿ ಮೈಲಿಗೆಯಲ್ಲವೇ..?
ಶುಭ ಸಮಾರಂಭಕ್ಕೆ ಆಹ್ವಾನಿಸಬಾರದೇಕೆ ನಿನ್ನ..
ಮೊದಲ ಮುಟ್ಟ ಎಲ್ಲರೂ ಸಂಭ್ರಮಿಸಿದ್ದೇವಲ್ಲವೇ..?
ಮುಟ್ಟಾದರೇಕೆ ಮುಟ್ಟಬಾರದು ನಿನ್ನ..
ಮುಟ್ಟಾಗುವೆಡೆಯಿಂದಲೇ ಹುಟ್ಟಿ ಬಂದವರಲ್ಲವೇ..?