STORYMIRROR

Ranjitha M

Abstract Tragedy Others

4  

Ranjitha M

Abstract Tragedy Others

ಬದುಕಿನ ಪಯಣ

ಬದುಕಿನ ಪಯಣ

1 min
278

ಹಸುಗೂಸಾಗಿ ಹುಟ್ಟಿ ಜಗಕೆ ಕಾಲಿಟ್ಟೆ

ಹಸಿದಾಗ ಹಾಲುಣಿಸಿದವರ ಮಮತೆಯ ಕಂಡೆ

ಅತ್ತಾಗ ಲಾಲಿ ಹಾಡಿ ಮಲಗಿಸಿದರು

ನಕ್ಕಾಗ ಸುತ್ತಲಿದ್ದವರು ನಕ್ಕರು


ಹಲ್ಲಿಲ್ಲದ ಬೊಚ್ಚು ಬಾಯಿಯಲೆ ನಕ್ಕೆ

ಮಾತನಾಡಲು ಬರದೆ ತೊದಲಿದೆ

ನಡೆಯಲು ಬಾರದೆ ಅಂಬೆಗಾಲಿಟ್ಟೆ

ಬಿದ್ದಾಗ ಎತ್ತಿ ಮುತ್ತನಿಟ್ಟು ಮುದ್ದಿಸಿದರು


ಬೆಳೆದೆ ಅಕ್ಕರೆಯ ಮಮತೆಯ ಕಡಲೊಳಗೆ

ಬೆರೆತೆ ಜಗದೊಳು ಪ್ರೇಮದ ಹಣತೆಯ ಹಚ್ಚಿದೆ

ವಯಸು ಕುದರೆಯನೇರಿ ಹೊರಟೇ ಬಿಟ್ಟಿತು

ಕೊನೆಗೆ ನಿಂತಿತು ಮುಪ್ಪಿನ ಹಾದಿಯೊಳಗೆ


ಈಗಲೂ ಬೊಚ್ಚು ಬಾಯಿಯೇ..!!

ಮಗು ಎನ್ನದೆ ಮುದುಕ ಎನ್ನುತ್ತಾರೆ

ನಡೆಯಲಾಗದೆ ಮೈ ಕೈ ಸೋಲುತ್ತಿದೆ

ಬಿದ್ದಾಗ ಎತ್ತಿ ಸಂತೈಸುವ ಕೈಗಳು ಕಾಣದಾಗಿದೆ


ಮುಪ್ಪು ಆವರಿಸಿದರು ಮನಸು ಮಗುವೆ

ಮಮತೆಯ ಒಡಲೊಂದು ಬೇಕಾಗಿದೆ

ಸಪ್ಪೆ ಬದುಕಿಗೆ ಸಾಂತ್ವನದ ನೆರಳು ಬೇಕಿದೆ

ಮಣ್ಣಾಗುವ ಮುನ್ನ ಜಗವ ಅರಿಯಬೇಕಿದೆ.


Rate this content
Log in

Similar kannada poem from Abstract