ಮಳೆಯೆಂಬ ಮಾಂತ್ರಿಕ
ಮಳೆಯೆಂಬ ಮಾಂತ್ರಿಕ
ಇಳೆಯ ಒಲವಿಗೆ ಮನಸೋತು
ಮಳೆಯೆಂಬ ಮಾಂತ್ರಿಕ ಬಂದ
ಧರಣಿಯ ಮನಕೆ ಸಂತಸವಾಯಿತು
ಬಳೆಗಳ ಕೈತುಂಬ ಭುವಿ ತೊಟ್ಟಿರುವಂತೆ
ಹೊಳೆವ ಕಾಮನಬಿಲ್ಲು ತೋರುವುದು
ಕಳಕಳೆಯಾದ ಹಸಿರು ಹುಲ್ಲುಗಳು
ಹೊಸ ಹಸಿರು ರೇಷಿಮೆ ಸೀರೆಯಂತೆ
ಕಂಗೊಳಿಸಿಹಳು ವಸುಂಧರೆ ನವ ತರುಣಿಯಂತೆ
ಮಳೆಯೆಂಬ ಮಾಂತ್ರಿಕ ಬಂದ
ಧರಿತ್ರಿಯು ಮಿಂಚುತಿಹಳು ಸುಮಂಗಲಿಯಂತೆ.
