Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Rathna Nagaraj

Classics

2  

Rathna Nagaraj

Classics

ರಂಗೇರಿದೆ

ರಂಗೇರಿದೆ

1 min
174


ಜೀವನ  ಚೆಲುವಿನ ಚಿತ್ತಾರ

ಬಣ್ಣ ತುಂಬಿ ,ಚೆಲುವ ಆಸ್ವಾಧಿಸುವ 

ಮನಸು ಮಂದಾರ

ಹಲವಾರು ಮಂದಿ ಇದ್ದಾರ

 

ಕೃಷ್ಣನ ಸುತ್ತ ರಂಗು ರಂಗಿನ  ಸಖಿಯರು

ಅವನೊ ಕೊಳಲು ಊದುವ ಗೋಪಿಕನು

ಇವರೂ ಮೋಹಕ ಚೆಲ್ಲುವ ಮೋಹನನ

ರಂಗ  ತರಂಗಿಣಿಯರು ಮನಮೋಹಕರು

 

ಷೋಡಶಿಯ ಮನದಲ್ಲಿ ರಂಗು 

ರಂಗಿನ ಕನಸುಗಳ ವಿಹಾರ 

ಪ್ರೇಮದ ಮುಸುಕಿನ  ಮಾಯಾಲೋಕ 

ಚೆಲ್ಲಿರುವುದು ಬಣ್ಣ ಬಣ್ಣದ  ನೆರಳು

 

ಮೂರು ಗಂಟಿನ  ನಂಟಿನಲ್ಲಿ 

ಅರಿಷಿಣ ಕುಂಕುಮದ ರಂಗು

ಇಬ್ಬರ ನಡುವೆ ಹೊಸೆದ  ಸಂಬಂಧ

ಏರಿಹುದು ಕೆನ್ನೆ ಮೇಲೆ ಕೆಂಪು ಕೆಂಪು ರಂಗು

 

ಮದುವಣೆಗಿತ್ತಿಯ ಕೈಯಲ್ಲಿತ್ತು

ಮದರಂಗಿಯ  ಅಚ್ಚೊತ್ತು

ಹೊಸ ಬಾಳಿನ ಚೆಲುವಿನ ರಂಗನ

ಮನದನ್ನೆ ಪ್ರೇಮ ವಿಲಾಸಿ ಮನನ

 

ಪುಟ ಪುಟನೆ ಮನೆ ತುಂಬ 

ನಡೆದಾಡುವ ಪಾಪುವಿನಲ್ಲಿ  

ಅಡಗಿರುವ ರಂಗಿನ ಸೊಗಸು

ಮನೆ ಮಂದಿಗೆ ನಗುವಿನ ಗುಂಗು 

 

ಅಂತರಂಗಕ್ಕೆ ಮಾತ್ರ ರಂಗೇ ? 

ಮನೆಯ  ಅಂಗಳದಿಯೂ ರಂಗು

ಅಲ್ಲಿಯು ಬಿಡದು ರಂಗಿನಾಟ 

ರಂಗೋಲಿಯೊಳಗೆ ನುಸಿಳಿಹುದು ರಂಗು

 

ವನವೆಲ್ಲಾ ವರ್ಣಮಯ  ಹೂವುಗಳು

ಆ ವರ್ಣಕ್ಕೆ ಇರುವುದು ಆಯಸ್ಕಾಂತದ

ಭಾವುಕ  ಸೊಜಿಗದ ಮನಸುಗಳು

ಭೃಂಗಗಳು ಬೆನ್ನೇರಿ ಬರುವ ಸೆಳೆತಗಳು 

  

ಮಳೆ ನಿಂತ ಮೇಲೆ  ಆಕಾಶದಿ 

ಮೂಡುವುದು ಏಳು ಬಣ್ಣಗಳ 

ಕಾಮನ ಬಿಲ್ಲು. ವೀಕ್ಷಿಸುವ ಕಣ್ಣುಗಳು

ವಿಶ್ಲೇಷಣೆಗೆ ರಂಗೇರುವ ವಿಚಾರಗಳು

 

ಹೊಳಿ ಹುಣ್ಣಿಮೆಗೆ ಹರಿಯುವುದು 

ಬಣ್ಣಗಳ ಹೊಳೆ. ಹಳೆಯ ವಿಷಮ

ಕೊಚ್ಚಿ ಹೋಗುವುದು  ರಂಗಿನಲ್ಲಿ ಕರಗಿ

ಹೊಸ ಆಸೆಗಳ ಹುಟ್ಟುವುದು

ರಂಗು ರಂಗಿನ ಹೊಳಿ ಹುಣ್ಣಿಮೆಯಲ್ಲಿ 


Rate this content
Log in

Similar kannada poem from Classics