STORYMIRROR

Rathna Nagaraj

Classics Inspirational Thriller

4  

Rathna Nagaraj

Classics Inspirational Thriller

ಮಳೆಯ ಕಂಪು

ಮಳೆಯ ಕಂಪು

1 min
280


ಸಂಜೆ ಮೋಡ ಕವಿಯಿತು ಗುಡುಗು ಮಿಂಚು ಮೇಳೈಯಿಸಿತು

ಟಪ ಟಪನೆ ದೊಡ್ಡ ದೊಡ್ಡ ಮಳೆ ಹನಿಯಿತು

ಬರು ಬರುತ್ತ ಬೀರುಸಾದ ಜೋರು ಮಳೆಯಾಗ ತೊಡಗಿತ್ತು

ಹೊರಗೆ ಒಣ ಹಾಕಿದ ಬಟ್ಟೆಗಳನ್ನು 

ಮನೆ ಒಳಗಿದ್ದವರು ಓಡಿ ಹೋಗಿ ಸೆಳೆದು ತಂದರು

ಎರಚಲು ತಡೆಯಲು ಸ್ವಲ್ಪವೇ ಸ್ವಲ್ಪವೇ

ಕಿಟಕಿ ಬಾಗಿಲುಗಳನ್ನು ತೆರೆದಿಟ್ಟು ಮುಚ್ಚಲಾಯಿತು


ಅಡಿಗೆ ಮನೆಯಲ್ಲಿ ಅಮ್ಮ ಸೊಸಿದ ಕಾಫಿ ವಾಸನೆ 

ಮೂಗಿಗೆ ಬಡಿಯಿತು 

ಬಿಸಿ ಬಸಿ ಕಾಫಿ ಸವಿ ಹಿತವಾಗಿತ್ತು

ಕೆಲ ನಿಮಿಷದ ತರುವಾಯ 

ಬಜ್ಜಿ ಕರೆಯುವ ಅಡುಗೆ ಕೊಣೆ ಗಮಲು ಕರೆ ಕೊಟ್ಟತು 

ಅಮ್ಮನ ಹಿಂಬದಿಗೆ ಸಾಗಿ ಕದ್ದ ರೀತಿಯಲ್ಲಿ 

ಆತುರದಲ್ಲಿ ಒಂದು ಬಿಸಿ ಬಜ್ಜಿ ಬಾಯಿಗೆ ಹಾಕಲು

 ನಾಲಿಗೆ ಸುಟ್ಟತು

ಅಮ್ಮನ ಎಚ್ಚರಿಕೆ ಕಡೆಗಣಿಸಿ

ಮತ್ತೊಂದಕ್ಕೆ ಕೈ ಹಾಕಿ

 ಮತ್ತೊಂದ ಮಗದೊಂದು 

 ಆಯಿತು


ಮನೆ ಮಂದಿಗೇಲ್ಲ ಕಾಫೀಯೊಂದಿಗೆ 

ಬಜ್ಜಿ ಸೇವಾರ್ಥ ನಡೆಯಿತು

ಅಪ್ಪ ಚಿಕ್ಕನಿಗೆ 

ಬಜ್ಜಿ ಸವಿಯುವ ಮಾರ್ಗದರ್ಶನ 

ನೀಡುತ್ತಿದರು ಮುದದಲ್ಲಿ

ಯೌವನವತಿ ಅಕ್ಕ ಮಲ್ಲಿಗೆ ಮೂಡಿದು

ಕಾಫಿ ಬಜ್ಜಿ ಸೆಯುತ್ತ ಮಲ್ಲಿಗೆ ಪರಿಮಳ ಆಸ್ವದಿಸುತ್ತ

ಕಾದಂಬರಿ ಓದುತ್ತ ಕನಸಿನ ಲೋಕದಲ್ಲಿ ವಿಹಾರಿಸುತ್ತದಳು


ಎಲ್ಲರಿಗೊ ಕಾಫಿ ಬಜ್ಜಿ ಹಂಚಿದ ಅಮ್ಮ 

ತನ್ನ ಪಾಲಿನೊಂದಿಗೆ ಅಪ್ಪನ ಕಾಲು ಬುಡದಲ್ಲಿ ಕುಳಿತು 

ದೂರದರ್ಶನ ವಿಕ್ಷಿಸ ತೊಡಗಿದಳು

ಅಂತು ಮಳೆ ಎಲ್ಲರ ಮುಖ್ಯ ಚಟುವಟಿಕೆಗಳನ್ನು ಸ್ಥಬ್ಧವಾಗಿಸಿ 

ಅವರವರ ಲೋಕದಲ್ಲಿದರು ಎಲ್ಲರನ್ನು ಮನೆಯೊಳಗೆ ಒಟ್ಟುಗೊಡಿಸಿತು 

ಮಣ್ನಿನ ಕಂಪನ್ನು ಎಲ್ಲೇಡೆ ಪಸರಿಸಿತು ಮಳೆ. 


Rate this content
Log in

Similar kannada poem from Classics