ಬುಧನಿಗೆ ಬೇಕಾಗಿದೆ
ಬುಧನಿಗೆ ಬೇಕಾಗಿದೆ


ಬುಧನಿಗೆ ಈಗ ಬೇಕಾಗಿದೆ ಹೃದಯ ಮನಸುಗಳಲ್ಲಿ ಸ್ವಲ್ಪ ಜಾಗ
ಒಂದು ಉದಾಹರಣೆಯಾಗಿ ಶ್ರೀಮಂತರ ಕುಟುಂಬದಲ್ಲಿ ಜನಿಸಲು
ಸದಾ ತನ್ನ ಸುತ್ತಲೂ ಸುತ್ತುವ ಬೆಂಗಾವಲಿನಿಂದ
ಸ್ವಪ್ರಯತ್ನದಿಂದ ದೂರವಾಗದಿರಲು
ಬುಧನಿಗೆ ಈಗ ಬೇಕಾಗಿದೆ ಯವ್ವನದ ಸವಿಯನ್ನು ಸವಿಯಲು
ಹೆಂಡತಿ - ಮಕ್ಕಳ ಸುಖ ಅನುಭವಿಸಲು
ಸಂಸಾರದ ಸಾರ ಅರಿಯಲು
ಬುಧನಿಗೆ ಈಗ ಬೇಕಾಗಿದೆ ಕೆಲವು ಸ್ಥಳಗಳು ಪ್ರಯಾಣಿಸಲು
ಹೊರ ಪ್ರಪಂಚದಲ್ಲಿ ಸುತ್ತಾಡಲು ಎಲ್ಲವನ್ನು ಹಿಂದೆ ಬಿಟ್ಟು
ತನ್ನ ಮುತ್ತುವರೆದ ಸಣ್ಣ ವರ್ತುಲ ಹಾಗು
ಬೆಚ್ಚನೆಯ ವಾತಾವರಣ ತೊರೆಯಲು
ಬುಧನಿಗೆ ಈಗ ಬೇಕಾಗಿದೆ ವಯಸ್ಸಾದ ಜನರ ಸೇವೆಗೈಯಲು
ಏಕೆಂದರೆ ಒಂದಲ್ಲ ಒಂದು ದಿವಸ ಪ್ರತಿಯೊಬ್ಬರು
ತಮ್ಮ ಬಲ ಕಳೆದುಕೊಂಡು ದುರ್ಬಲರಾಗುವರು
ಬುಧನಿಗೆ ಈಗ ಬೇಕಾಗಿದೆ ಶ್ರಧಾಂಜಲಿಗೆ ಸಾಕ್ಷಿಯಾಗಲು
ಪ್ರತಿಯೊಂದು ಕುಟುಂಬದಲ್ಲಿಯೂ ಪ್ರತಿಯೊಬ್ಬರಿಗೂ
ಕೊನೆ ಉಸಿರು ಖಚಿತ, ಅದರ ನೋವನ್ನು ಸಹಿಸಲು
ಬುಧನಿಗೆ ಈಗ ಬೇಕಾಗಿದೆ ಮಾನಿಸಿಕ ಸ್ಥೈರ್ಯ
ಅದಕ್ಕಾಗಿ ಧ್ಯಾನ ಅಗತ್ಯ, ಅದಕ್ಕಾಗಿ ಒಂದು ಮರದ ಆಸರೆ
ಅಗತ್ಯವಾಗಿರಲು
ಬುಧನಿಗೆ ಈಗ ಬೇಕಾಗಿದೆ ತಾವು ಗಳಿಸಿದ ಜ್ಞಾನವನ್ನು
ಜನಸಮ್ಮೊಹಕಲ್ಲದಿದರು ಗುಂಪು ಗುಂಪಿಗಾದರು
ಅರಿವನ್ನು ಹಂಚಲು
ಬುಧನಿಗೆ ಈಗ ಬೇಕಾಗಿದೆ ಅನುಭವ ಮತ್ತು ತಿಳುವಳಿಕೆಯನ್ನು
ಜಾಗದಿಂದ ಜಾಗಕ್ಕೆ ತೆರಳಿ , ತಮ್ಮ ಹಸಿವನ್ನು ನೀಗಿಸಲು
ಭಿಕ್ಷೆ ಬೇಡುವುದನ್ನು, ಜೀವನದಲ್ಲಿ ಸಹಿಷ್ಣತೆ ಪಾಠ ಕಲಿಯಲು
ಬುಧನಿಗೆ ಈಗ ಬೇಕಾಗಿದೆ ತಾವು ವಾಸಿಸುವ ಪರಿಸರದಲ್ಲಿ
ಆಗುವ ಅವಮಾನವನ್ನು ಹೆದರಿಸುವ ತಾಳ್ಮೆಯಿಂದ
ಮಾನಸಿಕ ಹಾಗು ದೈಹಿಕವಾಗಿ ಗಟ್ಟಿಯಾಗಲು
ಬುಧನಿಗೆ ಈಗ ಬೇಕಾಗಿದೆ ವ್ಯಕ್ತಿಗಳು ತಮ್ಮದೇಯಾದ
ತತ್ವಗಳನ್ನು ಅಳವಡಿಸಿ ತಮ್ಮ ವ್ಯಕ್ತಿತ್ವವನ್ನು ಕಾಯ್ದುಕೊಳ್ಳಲು
ವ್ಯ್ಯಕ್ತಿಯ ವ್ಯಕ್ತಿತ್ವಗಳನ್ನು ಅಳೆಯುವಂತಾಗಲು
ಕಟ್ಟ ಕಡೆಯದಾಗಿ ಬುಧನಿಗೆ ಈಗ ಬೇಕಾಗಿದೆ ಮನ್ಯುಶರಂತಾಗಿರಲು
ಮಾನವೀಯತೆ ಹಾಗು ಶಾಂತಿಪ್ರಿಯರಾಗಿರಲು
ಅದೇ ಪ್ರತಿಯೊಬ್ಬರ ಅಂತಿಮ ಅಗತ್ಯ ಅಗತ್ಯ ಅಗತ್ಯ