STORYMIRROR

Rathna Nagaraj

Thriller

3  

Rathna Nagaraj

Thriller

ಅಂದು ಇಂದು ಎಂದೆಂದೂ

ಅಂದು ಇಂದು ಎಂದೆಂದೂ

1 min
235

 

ಅಂದು

ಅಮ್ಮ ಲಾಲಿಸಿದ ಅಮ್ಮ, ಪಾಲಿಸಿದ ಅಮ್ಮ

ನಕ್ಕು ನಗಿಸಿದ ಅಮ್ಮ, ಕೈ ಹಿಡಿದು ನಡೆಸಿದ ಅಮ್ಮ

ಸಿಂಗರಿಸಿ ಮುದಗೊಂಡ ಅಮ್ಮ


ಲಂಗದಿಂದ ದಾವಣಿಗೆ ಬದಲಾದಂತೆ

ಅಮ್ಮ ಬದಲಾದಳು ಅಮ್ಮ ಬದಲಾದಳು

ಕೆಲಸ ಬೊಗಸೆ ಶುರುವಿಟ್ಟುಕೊಂಡಳು


ಅಡುಗೆ ಮನೆಯಲ್ಲಿನ 

ಕೆಂಪು ಕಣ್ಣು ಕಪ್ಪು ಬರೆಗೆ      ---ಹೋದ ಮನೆಯಲ್ಲಿ 

ಊಟಕ್ಕೆ ಬರವಿಲ್ಲದಂತಾಗುತ್ತೆಂದಳು

ಕಸ ಗುಡಿಸಿ ನೆಲ ಸಾರಿಸು ಎಂದಳು  ---ಹೋದ ಮನೆಯಲ್ಲಿ 

ತಗ್ಗಿ ಬಗ್ಗಿ ನಡೆಯಲು ಅನುಕೂಲವಾಯಿತು

ಬಟ್ಟೆ ಮುಸುರಿ ತಿಕ್ಕಿಸಿದಳು      ---ಹೋದ ಮನೆಯಲ್ಲಿ 

ಕೆಲಸಕ್ಕೆ ತಿಕ್ಕಾಟವಿಲ್ಲದಂತಾಯಿತು

ಪೂಜೆ ಪುನಸ್ಕಾರ, ಮಡಿ ಮೈಲಿಗೆ 

ತಿಳಿ ಹೇಳಿದಳು, ಸ್ವಚ್ಛತೆ ತಿಳಿಯಾಯಿತು   ---ಹೋದ ಮನೆಯಲ್ಲಿ 


ಕಾಲು ಮುಟ್ಟಿ ನಮಸ್ಕರಿಸು ಎಂದಳು

ಎಲ್ಲರು ನಮಸ್ಕರಿಸುವಂತಾದರು      ---ಹೋದ ಮನೆಯಲ್ಲಿ 

ಆದರ್ಶ ಪಾಠ ಕಲಿಸಿದ ಅಮ್ಮ        

ಮನಸು ದೇಹ ನಡೆ ನುಡಿಯಿಂದ 

ಆದರ್ಶ ಮಹಿಳೆ ಎನಿಸಿಕೊಂಡೆ        ---ಹೋದ ಮನೆಯಲ್ಲಿ 

     

ಇಂದು

ಅಮ್ಮ ಫೀಡಿಂಗ್ ಬಾಟ್ಲು ಕೊಟ್ಟ ನೆನಪು

ಅಮ್ಮ ಬೋರ್ಡ್ ಸ್ಕೂಲ್ಗೆ ಬಿಟ್ಟ ನೆನಪು

ಮಕ್ಕಳ ಬೇಡಿಕೆಗೆ ಆಯಾ ಅಮ್ಮನಾದ ನೆನಪು


ಅಡುಗೆ ಡಿನರ್‍ಗೆ ಹೋಟಲ್ ನೆನಪು

ಬಟ್ಟೆ ಬರೆಗೆ ವಾಷಿಂಗ್ ಮಿಷನ್ ನೆನಪು

ಧೂಳು ಕಸಕ್ಕೆ ಮಾಪಿಂಗ್ ನೆನೆಪು   

ಹಿರಿಯರನ್ನು ವೃದ್ಧಾಶ್ರಮಕ್ಕೆ ಬಿಟ್ಟ ನೆನಪು     


ಮಗಳು ಹೋದ ಮನೆಯಲ್ಲಿ 

ಸೊಸೆ ಮನೆಗೆ ಬಂದ ಮೇಲೆ ಎಲ್ಲವು ಆನ್‍ಲೈನ್

ಒಬ್ಬಟೆಂದರೆ ಪೀಜû

ಸದಾ ಕಂಪ್ಯೂಟರ್ ನೆಟ್ ಸ್ಯಾಲರಿ

ವಾಟ್‍ಪ್ಸ್ ಮೆಸೆಜು ಸಂದೇಶಗಳಲ್ಲಿ ಮಾತುಕತೆ

ಫೆಸ್‍ಬುಕ್‍ನಲ್ಲಿ ಭೇಟಿ


ರಕ್ತ ಚಲನೆ ಇಲ್ಲ ದೇಹ ಭಾರ ಉದರ ರೋಗ

ವಾಕಿಂಗ್, ಜಿಮ್ ಯೋಗದ ಯೋಗ

ಮತ್ತೆ ನಾನು ಅಮ್ಮನ ಮಗಳಾದೆ

ಮೊಮ್ಮಕಳು ಹುಟ್ಟಿದ ನಂತರವು, ಆದರೆ 

ವೃದ್ಧಾಶ್ರವಿಲ್ಲದೆ ಮನೆಯಲ್ಲಿ ಶ್ರಮ ಜೀವಿಯಾದೆ


Rate this content
Log in

Similar kannada poem from Thriller