STORYMIRROR

JAISHREE HALLUR

Classics Thriller Others

4  

JAISHREE HALLUR

Classics Thriller Others

ನಮ್ಮೂರ ಚೆಲುವೆಯರು

ನಮ್ಮೂರ ಚೆಲುವೆಯರು

1 min
383

ನಮ್ಮೂರಾಗಿನ್ ಸಡಗರದಾಗ,

ಸಂಗೀ, ನಿಂಗೀ, ಇವರೆಲ್ಲಾ..


ಇಲ್ ಕಲ್ ಸೀರೀಯುಟ್ಟು, 

ಅದರದೇ ಕುಬಸಾ ತೊಟ್ಟು, 

ಹಣೀಗಿ ಕುಂಕುಮಾ ಇಟ್ಟು, 

ತಲೀ ಮ್ಯಾಲೆ ಸೆರಗು ಹೊದ್ದು, 

ಮಿರಿ ಮಿರಿ ಮಿಂಚೂ ಹಾಂಗ ಕಣ್ಬಿಟ್ಗೊಂಡು, ತುಟಿಯಗಲಿಸಿ ನಕ್ಕೋತ ಕೂತರ...


ಆಹಾ! ಏನ್ಹೇಳ್ಲಿ ಆ ಚಂದಾನಾ...

ತುಂಬಿದ ಕೊಡಾ ಸೊಂಟ್ದಾಗ ಕುಣಿದ್ಹಂಗ

ಸಣ್ಣಾನ ಶ್ಯಾವೀಗಿ ಅಗಲಾಗ ನುಲಿದ್ಹಾಂಗ

ನುಣ್ಣಾನ ಗಲ್ಲದಾಗ ನಗೀಮಿಂಚು

ಸುಳಿದ್ಹಾಂಗ.


ಕಂಬದೊಳಗಿನ ಗೊಂಬೀ ಹ್ಹಾಂಗ

ಅಂಗಳದಾಗಿನ್ ಬೆಳದಿಂಗಳ್ಹಾಂಗ

ಪತ್ತಲದೊಳಗಿನ್ ಚಿತ್ತಾರದ್ಹಾಂಗ

ಚೊಚ್ಚಲು ಕೂಸಿನ ಮುದ್ದಿನ್ಹಾಂಗ


ಆಕಳುಕರು ಆಕಳಿಸಿದ್ಹಾಂಗ

ಮಕ್ಕಳ ಅಳು ಕಾತರಿಸಿದ್ಹಾಂಗ

ಹೊಕ್ಕಳ ಬಳ್ಳಿ ತಾ ಹೊರಳಾಡಿದ್ಹಾಂಗ

ಬಿಕ್ಕಳಿಸ್ತಾವ ಅವ್ವನೆದೀ ನಾಟಿದ್ಹಾಂಗ


ಬಾಳವ್ವ, ಕಾಳವ್ವ, ಗಂಗವ್ವಗಳೆಲ್ಲ

ಏಳೇಳು ಜನ್ಮಕೂ ತಾಯಂದಿರಾಗಿ

ಆಳಾಗಿ, ಅರಸಂಗೆ ಸತಿಯಾಗಿ

ಇಳೆಯೊಳಗೆ ತಾ ಎಳೆಯಂತಾಗಿ


ಬಸಿರಾಗಿ,ಆರು ಮೂರಾಗಿ, ಏಗಿ

ಉಸಿರಾಗಿ ಹೆತ್ತವಕೆ, ಹೆಸರಿಲ್ಲದೇ

ಅಳಿಸಿಹೋದವರು, ಉಳಿಸಿಹರು

ನಮ್ಮ ನಿಮ್ಮನು ಉಸಿರಾಡಲೆಂದು...


( ಮಹಿಳಾ ದಿನಾಚರಣೆ ದಿನದಂದು ಬರೆಯಬೇಕೆಂಬ ಉತ್ಕಟ ಆಸೆ , ಇಂದು ನೆರವೇರಿತೇನೋ..

ಚಿತ್ರ ನೋಡಿದೊಡನೆ ಅನಿಸಿದ್ದು ಈಗಷ್ಟೇ ಗೀಚಿದೆ. 

ಓದಿ ಖುಷಿಯಾದರೆ ತಿಳಿಸಿ..

ಧನ್ಯವಾದಗಳು ಸ್ನೇಹಿತರೆ..)


ಕೆಲವು ಪದಗಳ ಅರ್ಥ:


ಅಗಲು- ಊಟದ ತಟ್ಟೆ


ಪತ್ತಲ- ಸೀರೆ


ಚೊಚ್ಚಲು- ಮೊದಲನೆಯ ಮಗು


ಆರು ಮೂರಾಗಿ- ದಡೂತಿಯಾಗಿದ್ದವಳು ಸಣ್ಣಗಾಗಿ


ಏಗು- ದುಡಿ


Rate this content
Log in

Similar kannada poem from Classics