STORYMIRROR

JAISHREE HALLUR

Romance Classics Others

4  

JAISHREE HALLUR

Romance Classics Others

ಕಲರವ!!

ಕಲರವ!!

1 min
226

ಸುಮ್ಮನಾಗಿದ್ದ ಮನಸು ಗರಿಗೆದರಿತ್ತು

ಗಮ್ಯವರಿಯದ ಪ್ರೀತಿ ಮನೆಮಾಡಿದಾಗ, ಚಡಪಡಿಸುತ್ತ...


ತನ್ಮಯತೆಯಲ್ಲಿ ಏಕಾಂತ ಬಯಸಿತ್ತು

ರಮ್ಯಲೋಕದ ಕನಸಲ್ಲಿ ವಿಹರಿಸುವಾಗ, ಮಿಡಿಯುತ್ತ..


ಸುಗಮಸಂಗೀತದಂತೆ ನಿನ್ನೊಲವು

ಕರಣಗಳಿಗಿಂಪಾದಾಗ, ಆಲಾಪನೆ

ಶುರುವಾಗಿದೆ ತನ್ನಷ್ಟಕ್ಕೆ ತಾನೇ..


ತಾಳ ಹಾಕುತಿವೆ ಮುಂಗುರುಳು ತೂಗಿ,

ಕಿಣಿಕಿಣಿಸಿವೆ ಓಲೆಗಳು 

ಭಾವದುಂಬಿ ಝೇಂಕರಿಸುತ್ತ...


ಬಿರಿದ ಮಲ್ಲೆ ಕಂಪದು ತನನವಾಡಿದೆ

ಎದೆಯ ತುಂಬಿ, ತರಗೆಲೆಯಂತೆ.

ಮುಂಜಾನೆಯ ಮಂಜಿನಲ್ಲಿ..


ಚಿಗುರ ಹಸಿರಲ್ಲೂ ಮಧುರ ಛಾಯೆ

ಹಗುರ ಮನಕೆ ಇನಿಪು ನೆನಪು..

ನವಿರಾದ ಕವನ ಒಲವ ತಂತು.


Rate this content
Log in

Similar kannada poem from Romance