STORYMIRROR

JAISHREE HALLUR

Romance Classics Fantasy

4  

JAISHREE HALLUR

Romance Classics Fantasy

ಒಲುಮೆಗಳ ಉಪಾಸನೆ.

ಒಲುಮೆಗಳ ಉಪಾಸನೆ.

1 min
286

ಹೇ ಹುಡುಗೀ!


ಸರೀಸಮಯದಿ ...

ಸರಸಕೆಂದೇ ಬಂದೆ.

ವಿರಸದಿಂ..

ಮುನಿದೋಡಿ ಒಲ್ಲೆಯೆಂದೆ..?

ಅರಸ ನಾ ಬಂದಿಹೆ

 ನಿನ್ನರಸಿ ಬಲ್ಲೆ ನೀ....

ಅರಸಿ ನೀನೆಂದಾಧರಿಸುವಾತುರದಿ ನಾ

ಬರಸೆಳೆದಪ್ಪುವಾಸೆಗೆ

ತಣ್ಣನೆ ನೀರೆರೆದೆಯೇಕೆ?

ಕರೆದು ಮುದ್ದಿಪಳೆಂದೆನಿತೋ ಕನಸಿದ್ದೆ

ಬರೆದ ಕವನಕೆ ಹದವಾಗಿ ಕಂಪಿಸಿದ್ದೆ..

ಹರಿವ ಪ್ರೀತಿ ಒರತೆಗೆ 

ಸುಳಿಯಾದೆ ಏಕೆ?


ಸಪೂರ ಮೈಮಾಟ...

ನೋಟದಾ ಚೆಲ್ವು..

ಕಟಿಯ ಕುಲುಕಾಟಕೆ

ನೂಪುರಂಗಳ ಸಾಂಗತ್ಯ, ನಾಟ್ಯವಾಡಿದಂತೆ ನಡಿಗೆ

ಸಾಟಿಯಿಲ್ಲದಾ ಸೌಂದರ್ಯದುಡುಗೆ

ನಾಟಿ ನನ್ನೆದೆಗೆ 

ಮಾಡಿತೇನೋ ಘಾಸಿ!!!

ಪುಟಗಟ್ಟಲೆ ಬರೆದರೂ 

ಮುಗಿಯದೀ ಉಪಮೆ , 

ಒಲುಮೆಗಳ ಉಪಾಸನೆ. 


ಒಮ್ಮೆ ದಯೆತೋರಿ ಬಳಿಗೆ ಬಾ

ಹೆಮ್ಮೆಯ ನಲ್ಲ ನಾನಾಗುವೆ ನಿನಗೆ

ನಮ್ಮ ನಾವೇ ಅಲೌಖಿಕತೆಗೆ

ಸರಿದೂಗಿಸೋಣ ಗೆಳತೀ

ಸುಮ್ಮನೇಕೆ ದುಮ್ಮಾನದಾ ಸೋಗು?

ಹಮ್ಮಿಕೊಳ್ಳೋಣ ಬಳ್ಳಿಮರದಂತೆ

ನೆಚ್ಚಿ ನಮ್ಮೊಲವ ಗಾಡವಾಗಿ

ಬಚ್ಚಿಟ್ಟುಕೊಳ್ಳೋಣ ಎದೆಯ

ಗೂಡಲಿ ಬೆಚ್ಚಗೆ ಅನುಗಾಲಕೂ..


Rate this content
Log in

Similar kannada poem from Romance