STORYMIRROR

JAISHREE HALLUR

Romance Thriller Others

4  

JAISHREE HALLUR

Romance Thriller Others

ಮೈಮರೆತ ಮೋಹಕ ಭಂಗಿಯಿಲ್ಲಿ..

ಮೈಮರೆತ ಮೋಹಕ ಭಂಗಿಯಿಲ್ಲಿ..

1 min
284

ಪೆನ್ನೂ, ಹಾಳೆ ಎದುರಾದ ಪ್ರತೀ ನಿಮಿಷಾನೂ ನೆನಪಿಗೆ ಬರೋ ಮುಂಚೆ

ಒಂದು ಝಳಕ್ ತೋರಿಸ್ತೀಯಲ್ಲಾ...

ಅದೇ ಕಣೋ ನಂಗಿಷ್ಟ ಆಗೋದಂದ್ರೆ..

ಹಂಗೆ ಅನಿಸಿದಾಗಲೇ 

ಮೋಹಕ ಸಾಲೊಂದು ಮೆದುಳಿಂದ ಹರಿದು ಬರುವ ಹೊತ್ತು...


ಕಣ್ಣೊಳಗಿಂದ ಹೊರಬರುವ ಕಣ್ಣೀರು ನಿಧಾನವಾಗಿ ಕೆನ್ನೆ ಮೇಲೆ ಜಾರುವ ರೀತಿ, 

ಈ ಸಾಲು ಎದೆಯೊಳಗಿಂದ ಸೀದಾ

ಬಿಳೀ ಹಾಳೆಯೊಳಗೆ ಇಳಿದು ಸುರಳೀತವಾಗಿ ಜಾರಿ ಲೇಖನಿಗೂ ಸಿಗದೆ ನುಸುಳುವಾಟ

ಬಲು ಮೋಜಿನದಲ್ಲವೆ?


ಪಕಳೆಗಳಂತೆ ಅರಳುವ ಪದಗಳ ಲಾಲಿತ್ಯಕ್ಕೆ ಕುಣಿವ ಲೇಖನಿಗೆ ಎಂತದೋ ನಶೆಯೇರಿ,

ನಿಲ್ಲಲಾರದೆ, ಓಡಲಾರದೇ ಮೈಮರೆತ ಮೋಹಕ ಭಂಗಿಯಿಲ್ಲಿ..


ತನ್ನದೇ ಛಾಪು ಒತ್ತಿ,

ಬಗೆಯ ಭಾವಗಳಲ್ಲಿ ನೆನೆದು, ಮೂಡಿಸುವ ಕವನ ನಿನ್ನದೇ ಎಂದು 

ತಡವಾಗಿ ಅರಿತದ್ದಿದೆ..


ನೆನಪಿಗೂ ಸಿಗದೆ ನುಣುಚುವ ನಿನ್ನ ಹೂನಗೆ ಸಾಕಿಲ್ಲಿ,

ಸನಿಹ ಬಯಸುವ ನಿಮಿಷಕ್ಕೆ ಕಾದು ಕುಳಿತ ಹಂಸ ನೀರೊಳಗೇ ಗೀಚಿದಂತೆ..


Rate this content
Log in

Similar kannada poem from Romance