STORYMIRROR

JAISHREE HALLUR

Romance Classics Others

4  

JAISHREE HALLUR

Romance Classics Others

ಮೌನ ತರಲಿ ಸುಖದ ಸಂಪತ್ತು...

ಮೌನ ತರಲಿ ಸುಖದ ಸಂಪತ್ತು...

1 min
357

ನಿನ್ನ ನೋವಿನಾಳಕಿಳಿದು 

ಒಂದೂ ಬಿಡದೆ

ದುಃಖವನ್ನೆಲ್ಲ 

ಅಳಿಸಬೇಕು ನಾ...


ನನ್ನ ಎದೆಯೊಳಗಿನ ಸುಖವ 

ಧಾರೆಯೆರೆದು....

ಪರಿಪರಿಯಾಗಿ

ನಗಿಸಬೇಕು ನಿನ್ನ.


ಕುಳಿತು ಎದುರಲಿ, 

ನೋಟ ಬೆರೆಸಿ, ಬೆರಳ ತುದಿಯಲಿ

ಅತ್ತ ಕರೆಗಳನೊರೆಸಿ,

ಮುತ್ತು ಮಳೆಯ ಸುರಿಸಬೇಕು ನಾ


ಬಿಗಿದಪ್ಪಿ ಒಮ್ಮೆ ಮೃದುವಾಗಿ

ನಿಟ್ಟುಸಿರ ನೀವಿ

ವಿರಹಗಳ ಮರೆಸಿ

ಬರಸೆಳೆದು ಸಂತೈಸಬೇಕು ನಿನ್ನ.


ಆ ನಿನ್ನ ಮನದ ಓಣಿಯಲಿ 

ಒಂಟಿತನ ಹರಡುವ ಮುನ್ನ.....

ಏಕಾಂತ ಬೇಕೆನಿಸಿ ಮನಸು

ಮುದುಡುವ ಮುನ್ನ....


ನಾನಿಲ್ಲದಾಗ ನನ್ನ ನೆನಪು 

ಕಾಡದಿರಲಿ ಎಂದೂ

ಬಾರದಿರಲಿ ಮಾತಿಲ್ಲದ ಹೊತ್ತು

ಮೌನ ತರಲಿ ಸುಖದ ಸಂಪತ್ತು..


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance