Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

JAISHREE HALLUR

Abstract Romance Others

4  

JAISHREE HALLUR

Abstract Romance Others

ಸಾಕು ಮಾಡಿನ್ನು ಕಾಡುವಿಕೆಯನ್ನು...

ಸಾಕು ಮಾಡಿನ್ನು ಕಾಡುವಿಕೆಯನ್ನು...

1 min
322


ಏಯ್! ಬಾಲೆ, ನಿಲ್ಲೆ ಅಲ್ಲೇ,

ಮಕಾಡೆ ಮಲಗಿದ್ರೂ ಕಾಡ್ತೀ

ಅಂಗಾತ ಮಲಗಿದ್ರೂ ಕಾಡ್ತೀ

ಹಿಂಗಾದ್ರ ಹ್ಯಾಂಗss ಗೌಡ್ತೀ..


ಯುಗಾದಿಯೊಳಗ ಬೆಲ್ಲವಾಗಿದ್ದೆ

ನವಮೀಯೊಳಗ ಪಾನಕವಾದೆ

ಎಂತಾ ಸವಿ! ಕುಡಿದಷ್ಟೂ ನಾ ಹಾಳಾದೆ

ಇಷ್ಟ್ಯಾಕ ಕಾಡ್ತೀ ? ಬೇಗ ನನ್ನವಳಾಗಬಾರದೇ?


ಹಣೆಯ ಕುರುಳೆಲ್ಲ ಬಾಸಿಂಗವಾದಂತೆ,

ಕೆನ್ನೆ ಕೆಂಪು , ಮೂಗುತಿ ಒತ್ತಿದಂತೆ,

ತುಟಿಯಂಚು ಜೊನ್ನೆ ಜೇನಿನಂತೆ,

ಕಂಡಾಗಲೆಲ್ಲಾ, ಕಣ್ಣಲೇ ಕರೆದು ಮರೆಯಾದೆಯೇಕೆ?


ಸಣ್ಣಗೆ ನೀ ನಕ್ಕ ಪರಿಗೆ ನಾ ಸೋಲೆನೇನು ಹೇಳು..

ಮಿಣ್ಣಗೆ ನುಲಿವ ಸಲಿಗೆ ತರವೇ ನಿನಗೆ?

ಹೆಣ್ಣಿನ ಸೊಗಡು ನಾಚಿಕೆ ಅಲ್ಲವೇ ಜಾಣೆ?

ಈ ಬಣ್ಣನೆಯೊಂದಿಗೆ ಮನ್ನಣೆ ಬೇರೆ ಬೇಕೇನು? ( ಸಾಕು ಮಾಡಿನ್ನು ಕಾಡುವಿಕೆಯನ್ನು...😁😁😁)


Rate this content
Log in