STORYMIRROR

Vijaya Bharathi

Abstract Classics

4  

Vijaya Bharathi

Abstract Classics

ಗಂಗಾಲಹರಿ

ಗಂಗಾಲಹರಿ

1 min
45


ಧೂರ್ಜಟಿಯ ಜಟಾಜೂಟದಿಂ

ಧರೆಗಿಳಿಯುತಿಹ ಜಾಹ್ನವಿ

ಗಿರಿಶಿಖರಗಳ ಸುಳಿಸುಳಿದು

ಫಳಫಳನೆ ಹೊಳೆ ಹೊಳೆದು

ಬೀಗುತ್ತ ಬಳುಕುತ್ತ

ಒಮ್ಮೆ ಆಕ್ರೋಶದಿಂ

ಗರ್ವ ಗಂಗೆಯಾಗಿ

ಮತ್ತೊಮ್ಮೆ ಭೋರ್ಗರೆದು

ಭರಭರನೆ ಹರಿವ ಭಾಗಿರಥಿ

ಮಗದೊಮ್ಮೆ ಮಂದಗಮನೆ

ಮಂದ ಮಂದಾಕಿನಿ

ನಡುನಡುವೆ ಕಣ್ಮರೆಯಾಗಿ

ಅಡಗಿಕುಳಿತಿಹಪಾತಾಳಗಂಗೆ

ಹತ್ತು ಹಲವು ಹರಿಹುಗಳಿಂ

ದೇವಗಂಗಾವತರಣ

ಕೊನೆಗೊಮ್ಮೆ

ಪಾಪಿಗಳ ಕೊಳೆ ತೊಳಿವ

ಲೋಕಪಾವನೆ ತಾಯಿ

ಭುವಿಯಲಿ ಚಿರಸ್ಥಾಯಿ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract