ಶಿಕ್ಷಕರ ದಿನ
ಶಿಕ್ಷಕರ ದಿನ


ಗುರುವಂದನಾ
ಚಿಕ್ಕಂದಿನಿಂದೆನಗೆ
ಅಕ್ಕರವ ಕಲಿಸುತ್ತ
ಚೊಕ್ಕದಿಂ ಕರಗಳ ಪಿಡಿದು ನಡೆಸುತಾ
ಸಕ್ಕರೆಯ ಮಾತಿನಲಿ
ಅಕ್ಕರದಿಂ ಪೇಳಿಸುತ
ಪಕ್ಕದೊಳು ನಿಂತು ನಡೆಯಿಸಿದ ಗುರುವೇ
ಅಜ್ಞಾನವನೋಡಿಸಿ
ಸುಜ್ಞಾನ ಬೆಳಗಿಸುತ
ವಿಜ್ಞಾನದರ್ಥವನರುಹಿ ತಿಳಿಸುತಾ
ಖಜ್ಞಾನವನು ಕಲಿಸಿ
ಜಿಜ್ಞ್ಯಾಸೆ ಪರಿಹರಿಸಿ
ಸುಜ್ಞಾನ ನೀಡಿ ನಡೆಯಿಸಿದ ಗುರುವೇ
ನಿನ್ನ ಹಿರಿಮೆ ಸ್ಮರಿಸುತ
ನಿನ್ನಗರಿಮೆ ಪೊಗಳುತ
ನಿನ್ನೊಲುಮೆ ಗಳಿಸುತ ಮುಂಬಂದೆ ನಾ
ನಿನ್ನ ಹರಕೆಯುಬೇಕು
ನನ್ನಯಾ ಸಿರಿಮುಡಿಗೆ
ಧನ್ಯವಾದಗಳು ಓ ಶಿಕ್ಷಕ ನಿಮಗೇ
ಅಕ್ಷರವ ಕಲಿಸಿದಾ
ಶಿಕ್ಷಕನೆ ನಿನಗಿಂದು
ಶಿಕ್ಷಕರ ದಿನಾಚರಣೆಯ ಸಂಭ್ರಮಾ
ಶಿಕ್ಷಣವ ನೀಡುತ್ತಾ
ರಕ್ಷಿಸಿದಾ ಶ್ರೀ ಗುರುವೆ
ಶಿಕ್ಷಕರ ದಿನದಂದು ನಿನಗೆ ನಮನಾ