STORYMIRROR

Vijaya Bharathi

Abstract Classics Others

4  

Vijaya Bharathi

Abstract Classics Others

ಆಕಾಶ ದೀಪ ಗಳು

ಆಕಾಶ ದೀಪ ಗಳು

1 min
303


ಜಗಕೆರಡು ಕಣ್ಗಳಿವರು

ಜಗವ ಬೆಳಗುತಲಿಹರು

ಇನ ಶಶಿ ನಾಮದೊಳು

ಹೊಳೆವ ಆಕಾಶದೀಪಗಳು


ಜಗದಾತ್ಮ ನೀ ಸೂರ್ಯ

ಕಮಲಗಳಾ ಮಿತ್ರ

ನಮನಪ್ರಿಯನೀತ

ನಮಿಪರಾ ಧೀಃ ಪ್ರಚೋದಕ

ಅಜ್ಞಾನ ತಿಮಿರವನು 

ಮರೆಯಾಗಿಸುತ್ತಾ

ಸುಜ್ಞಾನ ದೀವಿಗೆಯೆ 

ಬೆಳಗಿಸುವ ಸವಿತಾ

ನಿಶೆಗೊಡೆಯ ರಜನೀಶ

ಮನಗಳಿಗಧೀಶ

ಕವಿಜನಮನಚೋರ

ಚಂದಿರ ಚಕೋರ

ಮನದಬೇಗೆಯ ಕಳೆದು

ತನುವ ತಂಪಾಗಿಸುತ

ಮನಮನಗಳನರಳಿಸುವ

ಇಂದು ಶೀತಲ ಬಿಂಬ

ತಾರೆಗಳನರಳಿಸುತ

 ಚಂದ್ರೋದಯ

ಕಮಲಗಳನರಳಿಸುತ 

ಸೂರ್ಯೋದಯ

ಇವರೀರ್ವರ ಉದಯ

ಜಗದ ಭಾಗ್ಯೋದಯ




Rate this content
Log in

Similar kannada poem from Abstract