ನನ್ನ ಅಪ್ಪ
ನನ್ನ ಅಪ್ಪ
ಇಳೆಗೆ ನಾನಿಳಿಯಲು
ಕಾರಣಕರ್ತ ನೀನಾಗೆ
ಜನಕನೆನಿಸಿದೆ ನನಗೆ
ನನ್ನೆಲ್ಲಾ ಆಸೆ ಆಕಾಂಕ್ಷೆಗಳ
ತಂಪೆರೆದು ಪೋಷಿಸುತ
ಪೋಷಕನಾದೆ ನೀನೆನಗೆ
ಸಕ್ಕರೆಯ ತೊದಲುನುಡಿಯ
ಅಕ್ಕರೆಯಿಂದಾಲಿಸುತ
ಅಪ್ಪ ನೀನಾದೆ ನನಗೆ
ಮೊದಲಕ್ಕರಗಳ ಅಕ್ಕಿಯಲಿ
ಬರೆಯಲು ಎನಗೆ ಕಲಿಸಿದ
ನೀನು ಆದಿಗುರುವಾದೆ ಎನಗೆ
ಸತ್ಯ ಧರ್ಮ ನ್ಯಾಯ ನೀತಿಗಳ
ಯುಕ್ತಾಯುಕ್ತಗಳ ಭೋದಿಸುತ
ನಿಜ ಭೋದಕ ನೀನಾದೆ ನನಗೆ
ದೇಶಪ್ರೇಮ ದೈವ ಭಕುತಿಗಳ
ಪ್ರೇರಣೆಯ ನೀಡುತ್ತ
ನಿಜಮತಿಯ ಪ್ರೇರಕನಾದೆ ಎನಗೆ
ಬದುಕಿನೊಳು ನಿಜಗುರಿಯ
ಮಾರ್ಗವನು ತೋ ರಿಸಿದ
ಮಾರ್ಗದರ್ಶಕ ನೀನಾದೆ ನನಗೆ
ನಿನ್ನ ಪುಣ್ಯಸ್ಮರಣೆ
ನನಗದೇ ಸ್ಫೂರ್ತಿ
ನನ್ನ ನೀಹರಸಿ ಹಾರೈಸು
ಓ ನನ್ನ ಅಪ್ಪ