ಮುದ್ದು ಮಗು
ಮುದ್ದು ಮಗು

1 min

389
ನೋಡು ನೋಡು ಬೇಗ ನೋಡು
ಮೂಡಿ ಬಂದ ಮುದ್ದು ಮಗನು
ದುಂಡು ದುಂಡು ಬೆಳ್ಳಿ ಮುಖವು
ನೋಡಲೆಷ್ಟು ಚಂದ ಅವನು
ತಾಯ ಗರ್ಭ ಭೇದಿಸುತ್ತಾ
ಭುವಿಯ ಮೇಲೆ ಇಳಿದನವನು
ಅಮ್ಮನೊಡಲ ಕಾವಿಗಾಗಿ
ಅತ್ತ ಇತ್ತ ಹುಡುಕುತಿಹನು
ಪುಟ್ಟ ಪುಟ್ಟ ಕಂಗಳನು
ಪಿಳಿ ಪಿಳಿ ಅರಳಿಸುತಲಿ
ಅತ್ತ ಇತ್ತ ಸುತ್ತ ಮುತ್ತ
ಮೆಲ್ಲ ಮೆಲ್ಲ ದಿಟ್ಟಿಸಿಹನು
ಇವರ್ಯಾರು ಯಾರಿವರು
ನನ್ನನ್ನೇ ನೋಡುತಿಹರು
ಅಚ್ಚರಿಯ ಅರೆಗಣ್ಣಿನಲಿ
ಬೆಚ್ಚಿ ನೋಡುತಿಹನು ಬೆಳ್ಳಿ