STORYMIRROR

Surabhi Latha

Abstract Classics Inspirational

4  

Surabhi Latha

Abstract Classics Inspirational

ಹನುಮ

ಹನುಮ

1 min
253

ಕೇಳು ಕೇಳು ಹನುಮ ಈ ಧ್ವನಿಯ

ಬಕುತಿಯಲಿ ಬೇಡಿದೆ ಒಂದು ಸಹಾಯ

ಹನುಮನ ಮಾತೆಂದರೆ ರಾಮನಿಗೆ ಪ್ರೀತಿ 

ಶ್ರೀ ರಾಮನಲ್ಲಿ ಒಮ್ಮೆ ಕೊಡು ನನ್ನ ಮಾಹಿತಿ


ಸೀತೆಯ ನೋವ ಅರಿತವನು ನೀನಲ್ಲವೇ

ರಾಮ ಸೀತೆಯ ಕೂಡಿಸಿದೆ ಅಂದಲ್ಲವೆ

ಬಕುತಳ ಮೊರೆಯ ಇಂದು ಕೇಳೆಯ

ರಾಮನ ದರುಶನವ ಮಾಡಿಸೆಯ


ಬೆಟ್ಟವ ಹೊತ್ತು ತಂದೆ ಲಕ್ಷ್ಮಣನ ಜೀವಕ್ಕಾಗಿ

ರಾಕ್ಷಸರ ಮಟ್ಟ ಹಾಕಿದೆ ಸೀತಾ ಮಾತೆಗಾಗಿ

ಅಲ್ಪಳ ಅಳಲು ಕೀಳು ಕರುಣೆ ಇಂದ 

ರಾಮನ ಕಾಣುವೆ ನಿನ್ನ ದಯೆಯಿಂದ


ಜಯ ಹನುಮ ಜೈ ಹನುಮ 

ಕೀಸರಿ ತನಯ ಶ್ರೀ ಹನುಮ

ಅಂಜಲಿ ಪುತ್ರ ಹೇ ಹನುಮ

ಶ್ರೀ ರಾಮ ಧೂತ ಜಯ ಹನುಮ



Rate this content
Log in

Similar kannada poem from Abstract