STORYMIRROR

Prabhakar Tamragouri

Abstract Classics Inspirational

4  

Prabhakar Tamragouri

Abstract Classics Inspirational

ವಿಸ್ತಾರವಾದ ಬಿರು ಕಡಲು

ವಿಸ್ತಾರವಾದ ಬಿರು ಕಡಲು

1 min
297


ಕಡಲಗುಂಟ ನಡೆಯಬಹುದಿತ್ತು ನೀನು 

ನಡೆಯುತ್ತಲೇ ದಡವನ್ನು ತಲುಪಬಹುದಿತ್ತು 

ಒಂದು ವೇಳೆ ,

ನೀನು ದಾರಿ ತಪ್ಪಿದರೂ 

ಸಹಾಯ ಮಾಡೆಂದು 

ಆ ಭಗವಂತನನ್ನು ಕರೆಯಬಹುದಿತ್ತು 


ನೀನು ಮೂರ್ಖ 

ರಾತ್ರಿಯೆಲ್ಲಾ ಮಂಗಳಾರತಿ ಎತ್ತಿ 

ಗುಡಿಯಲ್ಲಿ ಅವನನ್ನು ಮಲಗಿಸಿಯೇ ಬಿಟ್ಟೆ 

ಈಗ ದೊಡ್ಡದಾಗಿ 

ಕಡಲಿನಲೆಯೆದೆಯನ್ನೇ ಬಗೆದು 

ದಾರಿ ಹುಡುಕುವವನಂತೆ 

ಸುಮ್ಮನೆ ನಿಂತಿದ್ದೀಯಾ ......?

ಇದು ಸಾಮಾನ್ಯ ಕಡಲೆಂದು ತಿಳಿದಿದ್ದೀಯಾ .........?

ಇದು ಅರಬ್ಬೀ ಕಡಲು 

ಆಳೆತ್ತರಕ್ಕೆ ಬೀಸಿ ಬರುವ ಅಲೆ

ಬಂಡೆಗಪ್ಪಳಿಸಿ ಒಮ್ಮೆಗೆ ತನ್ನೊಳಗೆ 

ಎಳೆದೊಯ್ಯುವ ಬಹು ವಿಸ್ತಾರವಾದ 

ಬಿರು ಕಡಲು !!


ಈಗ ಹೇಳು 

ಕಡಲ ಆಚೆಯಿರುವ 

ಆ ಮಾಯಾನಗರಿಯನ್ನು 

ನೀ ಹೇಗೆ ತಲುಪುವೆ .....?

ಕನಿಷ್ಠ ನಿನಗಾಗಿ ಒಂದು ಪುಟ್ಟ 

ದೋಣಿಯಾದರೂ ಬೇಡವೇ ....?

ಆ ದೋಣಿಗೆ ಒಂದು ಚುಕ್ಕಾಣಿ 

ಈಗಲಾದರೂ ತಿಳಿ 

ಕಡಲ ಮಡಿಲಲ್ಲಿ ಇರುವ 

ಪ್ರತಿಯೊಂದು ಅಲೆಯನ್ನು 

ಅಳಿಸಿ ಹಾಕುವುದು ಸುಲಭವಲ್ಲ !



Rate this content
Log in

Similar kannada poem from Abstract