STORYMIRROR

Prabhakar Tamragouri

Classics Inspirational Others

4  

Prabhakar Tamragouri

Classics Inspirational Others

ಬೆಳಿಗ್ಗೆ  ಕಂಡಿದ್ದು ...

ಬೆಳಿಗ್ಗೆ  ಕಂಡಿದ್ದು ...

1 min
295

ಬೆಳ್ಳಿ ಮುಂಜಾವಿನಲಿ 

ಮಂದ ಮಾರುತ ಬೀಸುವಾಗ 

ರಂಗು ರಂಗಿನ ಸೂರ್ಯನ ಕಿರಣ 

ಒದ್ದೆ ಎಲೆಯ ಮೇಲೆ ಬಿದ್ದಾಗ 

ಇರುಳ ಸರಿಸಿ 

ಉಷೆ ಕಾಲಿಟ್ಟರೂ 

ಮಂಜು ತೆರೆ ಸರಿಸದ ಪ್ರಕೃತಿ ....!

ನಾಚಿ ನೀರಾಗಿದೆ ಇಳೆ 

ಮುಸುಕು ಹೊದ್ದು ಇನ್ನೂ ....!

ಯಾಕಿಷ್ಟು ನಾಚಿಕೆ ?

ತುಂಟ ರವಿ ಕುಡಿನೋಟದಿಂದಲೇ 

ಮೇಲು ಪರದೆಯ 

ಮೆಲ್ಲನೆ ಜಾರಿಸಿ 

ಪ್ರಕೃತಿಯ ಸಿರಿಮೊಗವ 

ನೋಡುವ ಉತ್ಕಟ ಬಯಕೆ .


ಆದರೆ ,

ಬೆಳ್ಳಂಬೆಳಗ್ಗೆ ಕಂಡಿದ್ದು 

ಮೆಲುಗಾಳಿಗೆ ಅತ್ತಿತ್ತ ಸುಳಿದಾಡುವ 

ಮುಂಗುರುಳ ಮಧ್ಯೆ 

ಸಾಲುಗಟ್ಟಿ ಹನಿವ 

ಇಬ್ಬನಿಯ ಮುತ್ತು ಸಾಲು !!

ಯಾರು ಪೋಣಿಸಿ ತೊಡಿಸಿದರು ....?

ಈ ಚೆಲುವಿಗೆ ಸಾಟಿ ಇಲ್ಲದ 

ಈ ಹಾರ ...?!



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics