Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Prabhakar Tamragouri

Abstract Classics Others

4  

Prabhakar Tamragouri

Abstract Classics Others

ಸೇಬುಗೆನ್ನೆಯ ಹುಡುಗಿಯರು

ಸೇಬುಗೆನ್ನೆಯ ಹುಡುಗಿಯರು

1 min
398


ಕಾಶ್ಮೀರದ ಸುತ್ತಲೂ ಹಬ್ಬಿರುವ 

ಸುಂದರ ಪರಿಸರದ ನಡುವೆ 

ನಕ್ಕು ನಲಿಯುವ 

ಸೇಬುಗೆನ್ನೆಯ ಹುಡುಗಿಯರು 

ಈಗ ಕಾಣುವುದಿಲ್ಲ 

ಪ್ರೇಮದ ಕನಸು ! 

ನಿತ್ಯ ನಡೆಯುವ 

ಮದ್ದು ಗುಂಡುಗಳ ಸಾಂಸ್ಕೃತಿಯಲ್ಲಿ 

ಹುದುಗಿ ಹೋಗಿರುವ 

ಪ್ರೀತಿ ಪ್ರೇಮವನ್ನು 

ಹುಡುಕುತ್ತಿದ್ದಾರೆ ಅವರು 

ಕಣಿವೆಯ ಸಾಲಿನಲ್ಲಿ !


ಬಂದೂಕುಗಳ ತುದಿ ಬಿತ್ತಿದ ಸಿಡಿಲಬ್ಬರಕ್ಕೆ

 ಜೋತುಬಿದ್ದ ಕಾಯಿಗೊಂಚಲಲಿ 

ವಾತ್ಸಲ್ಯಕ್ಕಾಗಿ ತವಕಿಸುತ್ತಿದ್ದಾರೆ 

ಹಾಲು ಕುಡಿವ ಮುದ್ದು ಕಂದಮ್ಮಗಳ 

ಬಾಯಿನೊರೆಯಿಂದುಕ್ಕಿದ ತುಟಿಯಂಚಿನಲ್ಲಿ 

ಮೂಡಿದ ನಗೆಯನ್ನು 

ಹಿಡಿದಿಟ್ಟುಕೊಳ್ಳಲು ತವಕಿಸುತ್ತಿದ್ದಾರೆ !


ಸದ್ದಿಲ್ಲದೇ ಸರಿವ ಬೂಟುಗಳಡಿಯಲ್ಲಿ

ಸೇರಿಹೋಗುವ ಕೆಂಪು ರಕ್ತಕ್ಕೆ 

ಕಣ್ಣೀರ ಹೊದಿಕೆ ಹೊದಿಸುತ್ತಿದ್ದಾರೆ 

ಬೆಳದಿಂಗಳಲ್ಲಿ ಹೊಳೆವ 

ಸೇಬುಗೆನ್ನೆಯ ಗುಳಿಯಲ್ಲಿ ಹರಿವ 

ಪ್ರೇಮದ ಝರಿ 

ಮೊಗೆ ಮೊಗೆದು ಕುಡಿವ 

ಸಮಯಕ್ಕಾಗಿ ಕಾಯುತ್ತಿದ್ದಾರೆ !

ಮಂದಿರದ ಸುತ್ತ ಕಾಯುತ್ತಿರುವ ಬಂದೂಕುಗಳು .......

ಈಗ ಬರಬಹುದು ದೇವ

ಎಂದು ಕಾಯುತ್ತಿದ್ದಾರೆ 

ಕಾಶ್ಮೀರದ ಸೇಬುಗೆನ್ನೆಯ ಹುಡುಗಿಯರು ....!!


Rate this content
Log in