STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಮಹಾಮಾತೆ

ಮಹಾಮಾತೆ

1 min
349


ನವರಾತ್ರಿಯ ನವಧಾತ್ರಿ

ನವಶಕ್ತಿ ಪ್ರದಾಯಿನಿ 

ನಮೋ ದುರ್ಗೆ ಮಹಾಕಾಳಿ 

ನಾರಾಯಣಿ ಮಂಗಳಂ 


ಮಹಿಷಾಸುರ ಮರ್ದಿನಿ 

ಮಹೇಶ ಮನೋಲ್ಲಾಸಿನಿ

ಮಾತಂಗ ತನಯೇ ಮಾನಿನಿ

ಮಹಾಮಾತೆ ಮಂಗಳಂ


ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ

ದುರಿತ ನಿವಾರಿಣಿ ದುರ್ಗೆ

ದಿವ್ಯಾಲಂಕಾರ ಭೂಷಿಣಿ

ದಯಾಮಯಿ ಮಂಗಳಂ


ವಿಧಾತನ ಮನದನ್ನೆ ವಾಣಿ

ವೀಣಾ ಪಾಣಿ ಹಂಸಾಸನಿ

ವಿದ್ಯಾಧಿ ದೇವತೆ ಶಾರದೇ

ವಿಶ್ವವಂದಿತೆ ಮಂಗಳಂ



ಮಹಿಷಾಸುರ ಮರ್ದಿನಿ

ಮಹಿಷ ಪುರಿ ನಿವಾಸಿನಿ

ಮಹಿಷ ಮರ್ದಿನಿ ವಿಜಯೇ

ಮಹಾಮಹಿಮೆ ಮಂಗಳಂ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract