STORYMIRROR

Ranjitha M

Abstract Classics Inspirational

4  

Ranjitha M

Abstract Classics Inspirational

ವೈಜ್ಞಾನಿಕ ಕಾದಂಬರಿಗಳ ಓದಿ

ವೈಜ್ಞಾನಿಕ ಕಾದಂಬರಿಗಳ ಓದಿ

1 min
405

ವೈಜ್ಞಾನಿಕ ಕಾದಂಬರಿಗಳ ಓದಿ

ಜ್ಞಾನವ ಸಂಪಾದಿಸಿ ಜನರೆಲ್ಲ

ನಮ್ಮ ಕನ್ನಡ ಭಾಷೆಯಲ್ಲಿದೆ

ಹಲವು ವೈಜ್ಞಾನಿಕ ಕಾದಂಬರಿಗಳು


ನಮ್ಮ ಎಸ್. ಎಲ್ ಭೈರಪ್ಪನವರು

ನಮ್ಮ ಕನ್ನಡ ಭಾಷೆಯ ಶ್ರೇಷ್ಠ ಕಾದಂಬರಿಕಾರರು

ಇವರು ರಚಿಸಿದ "ಯಾನ " ಎಂಬ ಕಾದಂಬರಿ

ಇದರಲ್ಲಿದೆ ಅಂತರಿಕ್ಷ ವಿಜ್ಞಾನದ ಶೋಧನೆಯ ಬಗೆಗೆ


"ಗಾಳಕ್ಕೆ ಸಿಕ್ಕ ಚಂದಿರ" ಎಂಬ ಕಾದಂಬರಿ

ಕಾದಂಬರಿಕಾರ್ತಿ ಸವಿತಾ ಶ್ರೀನಿವಾಸರ ಕೃತಿ

"ತ್ರಿಲೋಕ ಸಂಚಾರಿ ನೀರೆ" ಎಂಬ ಕಾದಂಬರಿ

ಇದು ಕೂಡ ಇವರೇ ರಚಿಸಿದ ವೈಜ್ಞಾನಿಕ ಕಾದಂಬರಿ


"ಪಾರ್ಥನ" ಎಂಬ ವೈಜ್ಞಾನಿಕ ಕಾದಂಬರಿ

ಕಾದಂಬರಿಕಾರರಾದ ಯಂಡಮೂರಿ ವಿರೇಂದ್ರನಾಥರವರ ಕೃತಿ

"ನಂಜಾದ ನೆನಪು" ಎಂಬ ವೈಜ್ಞಾನಿಕ ಕಾದಂಬರಿ 

ಕಾದಂಬರಿಕಾರ್ತಿ ಚಿತ್ರಲೇಖ ಶಶಿಚಂದ್ರನ್ ಅವರ ಕೃತಿ


" ಸು " ಎಂಬ ವೈಜ್ಞಾನಿಕ ಕಾದಂಬರಿ

ಕಾದಂಬರಿಕಾರರಾದ ಪ್ರಸನ್ನ ಸಂತೇಕಡೂರರ ಕೃತಿ

ಕ್ಯಾನ್ಸರ್ ಕಾಯಿಲೆಯ ಬಗೆಗಿನ ಸಂಶೋಧನೆಗಳು

ಹಲವು ವೈಜ್ಞಾನಿಕ ವಿಷಯಗಳು ಇದರಲ್ಲಿವೆ


ವೈಜ್ಞಾನಿಕ ಪತ್ತೆದಾರಿ ಕಾದಂಬರಿ "ಮಾಯ"

ಕಾದಂಬರಿಕಾರರಾದ ರಾಜಶೇಖರ ಭೂಸನೂರ ಮಠರ ಕೃತಿ

"ಭೂಗರ್ಭ ಯಾತ್ರೆ" ಎಂಬ ವೈಜ್ಞಾನಿಕ ಕಾದಂಬರಿ

ಇದುವೆ ಕವಿ ಸಾಹಿತಿಗಳಾದ ಗೋಪಾಲಕೃಷ್ಣ ಅಡಿಗರ ಅನುವಾದಿತ ಕೃತಿ


ಕನ್ನಡ ಭಾಷೆಯಲಿಹುದು ಹಲವು ವೈಜ್ಞಾನಿಕ ಕಾದಂಬರಿಗಳು

ಪುಸ್ತಕ ಅಭಿಮಾನಿಗಳೆಲ್ಲ ಓದಿರಿ

ಹೊಸ ಹೊಸ ವಿಷಯಗಳನ್ನು ತಿಳಿರಿ

ಬನ್ನಿರೆಲ್ಲ ವೈಜ್ಞಾನಿಕ ಕಾದಂಬರಿಗಳ ಓದುವ.



Rate this content
Log in

Similar kannada poem from Abstract