STORYMIRROR

Rathna Nagaraj

Abstract Classics Others

4  

Rathna Nagaraj

Abstract Classics Others

ಮಾಯಾ ಮನಸು

ಮಾಯಾ ಮನಸು

1 min
282


ಕುಸುಮ ಕೋಮಲೆ ಮನಸ್ಸು ನೋಡಿದ್ದಲ್ಲ ಸುಂದರ ಅಖಂಡ

 ಮನ ತುಂಬ 

ಬಣ್ಣ ಬಣ್ಣದ ಹೂವಿನ ಚಿತ್ತಾರ


ನಿಷ್ಕಳಂಕ ಮನಸ್ಸು 

ಬೇಧ ಭಾವ ಎಣಿಸದು 

ವೈರತ್ವ ಅರಿಯದು 

ವೈಮನಸು ತಿಳಿಯದು 


ತನ್ನ ಜಗತ್ತಿನಲ್ಲಿ ತಾನೀರೇ ಬಿಡುವುದೇ ಜಗತ್ತು 

ಕ್ರೋಧ ಮತ್ಸರ ಮೆಲ್ಲಮೆಲ್ಲನೆ ಅಡಿಯಿಡೆ

ಜವಾಬ್ದಾರಿ ತಿಳಿಯರಿಯೆ ಅಳತೆಗೋಲು ಜೀವನ 

ಸಂಕಷ್ಟ ತಲೆ ತೂರಿ ಮನಸಿಗೆ ಆಗಿದೆ ಎಲ್ಲವೂ ಅಯೋಮಯ 


ಸಿಡುಕೋ ಅಸಮಾಧಾನ ನೃತ್ಯವಾಡುತ್ತಿರಲು 

ಹಿತವಚನ ಶುಭನುಡಿ ಅಸಹನಿಯವಾಗಿರಲು

 ನೈಜ ಜೀವನ 

ವಾಸ್ತವ ಮನಕುಲ ಸತ್ಯ 

ದೃಢ ಸಂಕಲ್ಪ ತೊಟ್ಟಿದೆ 



 ಚಂಚಲ ಚಿತ್ತ ಮನಸ್ಸು 

 ಹೂವಿಂದ ಹೂವಿಗೆ ಹಾರುವ ಚಿಟ್ಟೆಯಂತಾಗಿದೆ 

ಯಾವುದರಲ್ಲೂ ಸ್ಥಿರವಿಲ್ಲ

 ಅತಂತ್ರ ಜೀವನ ಪಯಣ ಕಾಮಕ್ರೋಶ ಒಮ್ಮೆ ಮೆಟ್ಟಿದರೆ ಪದೇ ಪದೇ ಅದರ ಸುತ್ತಲೆ ತಿರುಗುತ್ತಾ ತಿರುಗುವ ಪೀಡಕನಾಗಿರೆ ವ್ಯಕ್ತಿಯ ವ್ಯಕ್ತಿತ್ವ 

ಹುಟ್ಟಿದ ಮನೆಯಿಂದ ಬೆಳೆದ ಪರಿಸರದಿಂದ ನಿರೂಪಗೊಂಡಿದೆ 


ಶಾಂತ ಸರೋವರದಂತೆ ಮನಸ್ಸು 

ಹರಿಯುವ ನದಿಯಂತೆ

ಮನುಷ್ಯ ಮನುಷ್ಯನಾಗಿ ಉಳಿಯುತ್ತಾನೆ

 ವೃತ ಕಲ್ಲು ಎಸೆದು ಅದನ್ನು ಕಲಕಿದರೆ ಕದಡುವುದು ಮನ


ಶಾಂತಿ ಮನ ಶಾಂತಿಗೆ ದಾರಿ 

ಇಲ್ಲದೆ ಹೋದರೆ ಇದ್ದು ಇಲ್ಲದಂತೆ 

ಇತರರಿಗೆ ಹೊರೆಯಾಗುವ ಇಲ್ಲವೇ ಆಡಿಕೊಳ್ಳುವವರ ವಸ್ತುವಾಗಿ

ಭೂಮಿಗೆ ಭಾರವಾಗುವುದು ಬದುಕು ಸಹ ಹೃದಯ ಸಹನೆ ಸಹವರ್ತನೆ

ಸದಾ ಇರಲಿ ಪ್ರತಿಯೊಬ್ಬರಲ್ಲೂ ಹಗುರವಾಗಲಿ ಮರೆಯದಿರಲಿ ಚೇತನಗಳು 

ಮೆರೆಯಲಿ ಸೂಪ್ತ ಚೇತನಗಳು


Rate this content
Log in

Similar kannada poem from Abstract