ಮಳೆಯ ಬಂಧನ
ಮಳೆಯ ಬಂಧನ
ಮಳೆಯ ಬಂಧನ
ಕಾರಮೋಡ ಮುಚ್ಚಿದೆ
ಸೋನೆ ಮಳೆ ಸುರಿದಿದೆ
ಬೆಚ್ಚನೆ ಅಪ್ಪುಗೆ ಕವಚ್ಚಿದೆ
ಬಿಡಿಸಲಾರದ ಬಂಧನಗಳು
ಮತ್ತಷ್ಟು ಹತ್ತಿರ ಸೆಳೆದಿದೆ
ಕಹಿ ಘಟನೆಗಳು ಮರೆಯಾಗಿದೆ
ಪ್ರಸ್ತುತ ಸಿಹಿ ಸಿಹಿ
ನೆನಪುಗಳು ಉದಯಿಸಿದೆ
ಗುಬಚ್ಚಿ ಗೂಡಿನಲ್ಲಿ
ಕಲರವ ನಿಂತ್ತಿದೆ
ತಾಯಿ ರೆಕ್ಕೆ ಅಡಿಯಲ್ಲಿ
ಮರಿಗಳು ನಿದ್ರಿಸುತ್ತಿದೆ
ಹಸು ಕರುಗಳು ಎಮ್ಮೆ
ಬಾಯಿ ಮೆಲಕು ಹಾಕುತ್ತ
ಮಳೆಯನ್ನು ಮೆಲಕು ಹಾಕುತ್ತಿದೆ
ನಾಯಿ ಬೆಕ್ಕು ಮೌನಕ್ಕೆ ಶರಣಾಗಿದೆ
ಪ್ರಕೃತಿ ಮಾತ್ರ ಸಂತಸದಿಂದೆ
ಬೀಸುವ ಗಾಳಿಗೆ ನಲಿದಾಡಿದೆ
ಮನೆಯ ಹಿರಿಯರು
ಗತವನ್ನು ನೆನೆಯುತ್ತವಂತ್ತಿದೆ
ಋತು ಚಕ್ರ , ಕಾಲ ಚಕ್ರಗಳ
ವಿಸ್ಮಯವನ್ನು ತಾಳೆ ಮಾಡುವಂತ್ತಿದೆ
ಬಾಲೆ ಬಾಲಕರನ್ನು
ಮನೆಯೋಳಗೆ ಕೂಡಿ ಹಾಕಿದಂತತ್ತಿದೆ
ಅವರ ಕೊಸಾರಟ ನಡೆಯುತ್ತಿದೆ
ಅಪ್ಪ ಅಮ್ಮ ಗದರಿದಂತ್ತಿದೆ
ಎಲ್ಲಾ ಮನೆಯ ಮಂದಿಯನ್ನು
ಮನೆಯೊಳಗೆ ಇರಿಸಿ
ಮಳೆ ಸಂಭ್ರಮಿಸುತ್ತಿದೆ
ಅಕ್ಕ ಪಕ್ಕದ ಮನೆಯೊಳಗೆ
ಕೂತ ಮಂದಿ ಚಟುವಟಿಕೆ
ಸ್ಥಬ್ಧವಾದಂತ್ತಿದೆ
ಕಾಫಿ ಡೇ ಕರಿದ ತಿಂಡಿ
ಪರಿಮಳ ಪ್ರಚೋದಿಸುತ್ತಿದೆ
ನವ ಜೋಡಿ ನವ ದಂಪತಿ
ಮುಸುಕಿನೋಳಗಿನ
ರಂಗಿನಾಟವನ್ನು
ರಗ್ಗು ವೀಕ್ಷಿಸುತ್ತಿದೆ
ಪ್ರಯದವರ ಪುಟ ಪುಟನೆ
ಪುಟಿದೇಳುವ ಹೊಸ ಹೊಸ
ಭಾವ ರಾಗಗಳು
ಸಂಚಾರಿ ವಾಹಿನಲ್ಲಿ
ಸಂದೇಶಗಳು ರವಾನೆಯಾಗುತ್ತಿದೆ
ಭಕ್ತರನ್ನು ಕಾಣದೆ
ದೇಗುಲಗಳು ಬಾಗಿಲು
ಹಾಕಿ ಕೊಂಡತ್ತಿದೆ
