STORYMIRROR

Rathna Nagaraj

Classics Inspirational Others

4  

Rathna Nagaraj

Classics Inspirational Others

ನವರಂಗ

ನವರಂಗ

1 min
227

ಹೇಮಾವಂತನ ಪುತ್ರಿ 

ಶಾಂತ ಸ್ವರೂಪಿಣಿ 

ಹಿಮದಂತೆ ಸ್ವಚ್ಛಧಾರಿಣಿ ಶ್ವೇತಧಾರಣಿ 

 ಸಾಧನೆಯ ಆಕಾಂಕ್ಷಿದಾಯಿನಿ 

ಅನಪೇಕ್ಷ ನಿರಾಕರಣೆ 

ಸದಾಚಾರಿ ಸಂರಕ್ಷಣೆ

ದೈವಿಕ ಸಾಹಸ ನೀಲಾಂಬರಿ 

ಮನಸಾ ತೃಪ್ತಿ ನಗುವ ಚೆಲುವ

ಸಂತೋಷ ಮಾತೆ 

ಪಚ್ಚೆ ಪೈರು ಹೂದೋಟ 

ಹಸಿರುಟ್ಟ ವನಸಿರಿಯೇ

ಕೇಡು ದ್ವೇಷ ಸಹಿಸದಾತೆ 

  ಆಂದಕಾರದಿ ಹೊಳೆಯುವ ಜ್ಯೋತಿ 

ಹೋಮ ಹವನ ದಲ್ಲಿ 

ನಳನಳಿಸುವ ನಳಿನಿ 

ನವಿಲಿನಂತೆ ಗರಿಕೆಧರೆ 

ಮನಸೆಳೆಯುವ ಮಯೂರಿ 

ಹೆಣ್ಣು ತನಕ್ಕೆ ಶೋಭಾದಾಯಿನಿ

 ಮಂಗಳ ದೇವಿ ನೀ 

ನಿನಗೆ ನಮೋ ನಮೋಸ್ತುತೆ



Rate this content
Log in

Similar kannada poem from Classics