STORYMIRROR

Rathna Nagaraj

Action Inspirational Others

4  

Rathna Nagaraj

Action Inspirational Others

ಪ್ರೇರಣೆ

ಪ್ರೇರಣೆ

1 min
306

 

ಕಲಿತ ಬಲಿತ ಯುವಕ

ನೌಕರಿಗಾಗಿ ಅಲೆದ

ಲಂಚ ಒತ್ತಡವಿಲ್ಲದೆ

ಬೆವರುಗಟ್ಟಿ ಸುಸ್ತಾದ

ಆಗ ಕೇಳಿಸಿತು ಒಂದು ಮಾರ್ದನಿ

ಒಂದರಲ್ಲೇ ಉದ್ಯೋಗ ಮತ್ತು ದೇಶಸೇವೆ


ಮಮತೆಯ ಕಣ್ಣೀರು

ಸೋತ ಕಾಲು ಮಾಸಿದ ಬಟ್ಟೆ ಕಡೆ ತೋರಿಸಿ 

ಪಯಣಿಸಿದ ಜೀವಿಸುವುದಕ್ಕಾಗಿ.


ಕೆಲದಿನ ಇರುಸು ಮುರುಸಿನ ಹವ

ಮಣ್ಣಿನ ಜ್ವರ ಜಡಗಟ್ಟಿದ ಮನ

ಯಾಂತ್ರಿಕ ಶಿಷ್ಟಾಚಾರ ಸಲಾಮುಗಳು

ಮಡುಗಟ್ಟಿದ ನೆನಪುಗಳು

ಇದ್ದಕ್ಕಿದ್ದಂತೆ ಸಿಡಿಲಿಗಿಂತ ಮಿಗಿಲಾದ

ಆರ್ಭಟ ಅಬ್ಬರ, ಮೈಯ್ಯಲ್ಲಿ ಮಿಂಚಿನ ಸಂಚಾರ

ಅಬಲೆಯ ವಿವಸ್ತ್ರ, ಅಸಹಾಯಕರ ನೆತ್ತರ ಕೋಡಿ

ಕರುಳು ಕಲಸಿ ಹೋದಂತ ಆಕ್ರಂದನ


ದಾರಿ ಹೊಕ್ಕರು

ಕಣ್ಣು ಕಿವಿ ಬಾಯಿ ಇಲ್ಲದಂತೆ ಹೋದರು

ಬಿಸಿರಕ್ತ ಜಗತ್ತಿನ ವಕ್ರನೀತಿ ಅರಿಯದೆ

ದೌಡಾಯಿಸಿ ತನ್ನ ಅಂಗಿ ಹೊದಿಸಿ 

ಮುಡಿ ಕಟ್ಟಿ ನಡೆಸಿದ


ಗಂಗೆಯಲಿ ಮೀಯಿಸಿ

ಯಮುನೆಯಲಿ ತೇಲಿಸಿ

ಕಾವೇರಿ ಜಲ ಉಣ್ಣಿಸಿ

ಮುದುಡಿದ ಅವಳಲ್ಲಿ 

ಕಮಲದ ಮುಖ ಕಾಣಿಸಿದ


ಕಿತ್ತೊರಿನ ಕಥೆ ಹೇಳಿ

ನವಿಲೂರಿನ ಚೆಲುವೆಯಾದಳು

ಕಾಶ್ಮೀರದ ಸೇಬಿನ ಕನ್ನೆಯವಳು


ಅವನಲ್ಲಿ ನವ ಚೈತನ್ಯ

ದುಷ್ಟ ಸಂಹಾರ ಶಿಷ್ಟ ರಕ್ಷಣೆ

ತ್ಯಾಗ ಬಲಿದಾನ ಆತ್ಮ ಪ್ರೇರಣೆ

ಹೊಟ್ಟೆ ಕಾಣಲಿಲ್ಲ

ಆಯಿ ಅಬ್ಬ ಉತ್ತರ ದಕ್ಷಿಣವಾಗಿ 

ಅಣ್ಣ ತಂಗಿ ಪೂರ್ವ ಪಶ್ಚಿಮವಾಗಿ

ಭಾರತಾಂಬೆ ಒಬ್ಬಳೆ ಕಂಡಳಲ್ಲಿ



Rate this content
Log in

Similar kannada poem from Action