STORYMIRROR

Prabhakar Tamragouri

Action Classics Inspirational

4  

Prabhakar Tamragouri

Action Classics Inspirational

ಎಲ್ಲಿ ಮರೆಯಾದವು......?

ಎಲ್ಲಿ ಮರೆಯಾದವು......?

1 min
289


ಮೊನ್ನೆ ಮೊನ್ನೆ ತನಕ

ಮನೆಯ ಎದುರು ಕಿಟಕಿಯಿಂದ

ಕಾಣಿಸುತ್ತಿದ್ದ ಮೈಲುಗಳುದ್ದಕ್ಕೂ

ಎದ್ದು ಕಾಣಿಸುತ್ತಿದ್ದ

ಆ ಬೆಟ್ಟದ ( ಗುಡ್ಡದ ) ಸಾಲುಗಳ

ಉದ್ದಕ್ಕೂ ಬೆಳ್ಳಿ ಗೆರೆಯಂತೆ ಹೊಳೆಯುತ್ತ

ಜುಳು ಜುಳು ಮಾಡುತ್ತ 

ಹರಿಯುತ್ತಿದ್ದ ಗಂಗಾವಳಿ ನದಿ

ಸಾಲು ಮರಗಳ ನಡುವೆ

ಸಾಗಿ ಹೋಗುತ್ತಿದ್ದ 

ಆ ಎತ್ತಿನ ಬಂಡಿಗಳು

ಎಲ್ಲಾ ಈಗ 

ಎಲ್ಲಿ ಮರೆಯಾದವು .....?


ಚುಮು ಚುಮು ಮುಂಜಾವಿನ

ಬ್ರಾಹ್ಮಿ ಮುಹೂರ್ತದಲ್ಲಿ

ಮನೆಯ ಹೊರ ಬಾಗಿಲು ತೆರೆದಾಗ

ಸೊಂಯ್ಗುಡುತ್ತ ಮೈ ಸೋಕಿ

ಸಾಗುವ ಆ ಕುಳಿರ್ಗಾಳಿ

ಮಲ್ಲಿಗೆ ಅರಳುವ ಸಮಯಕ್ಕೆ

ನಕ್ಕು ನಗುತ್ತ ಸಾಗುವ ಆ ಚಂದ್ರ

ಕುಹೂ ಕುಹೂ ಕೂಗುವ

ಕೋಗಿಲೆಯ ಸ್ವರ

ಎಲ್ಲಿ ಮರೆಯಾದವು ....?


ಆಕಾಶದೆತ್ತರಕ್ಕೆ ಬೆಳೆದು ನಿಂತಿದೆ

ಮಹಲು , ಕಾರ್ಖಾನೆಗಳು

ಬಾಗಿಲು ತೆರೆದರೆ ಕಾಣುವುದು

ಕಾಂಪೌಂಡ್ ಗೋಡೆಗಳು .....

ಆ ಬೆಟ್ಟ ( ಗುಡ್ಡದ ) ಸಾಲುಗಳು

ಎಲ್ಲಾ ಎಲ್ಲಿ ಮರೆಯಾದವು .....?




Rate this content
Log in

Similar kannada poem from Action