STORYMIRROR

Ranjitha Ranju

Tragedy Action Inspirational

4  

Ranjitha Ranju

Tragedy Action Inspirational

ದಾಖಲೆ ತೋರಿಸುವೆವು

ದಾಖಲೆ ತೋರಿಸುವೆವು

1 min
278

ದಾಖಲೆ ತೋರಿಸುವೆವು

ದಾರಿದ್ರ್ಯ ಓಡಿಸುವಿರಾ,

ದಿಢೀರ್ ಶ್ರೀಮಂತಗೊಳಿಸುವಿರಾ,

ದಣಿವು ಮುಕ್ತ ದೇಶ ಕಟ್ಟುವಿರಾ?


ದಾಖಲೆ ತೋರಿಸುವೆವು

ಅನಾಥರಿಗೆ ಆಶ್ರಯವಾಗುವಿರಾ,

ಅಂಧರಿಗೆ ಬೆಳಕನೀಯುವಿರಾ,

ಅಂತಃಕಲಹಕ್ಕೆ ತೆರೆ ಎಳೆಯುವಿರಾ?


ದಾಖಲೆ ತೋರಿಸುವೆವು

ಜಾತಿ ಮೀರಿದ ನೀತಿ ತರುವಿರಾ,

ಧರ್ಮಾತೀತದ ದೈನ್ಯತೆ ಮೆರೆವಿರಾ,

ಅಖಂಡ ಏಕತೆಯ ಸಾಧಿಸುವಿರಾ?


ದಾಖಲೆ ತೋರಿಸುವೆವು

ಕಟ್ಟುಪಾಡ ಕಿತ್ತೊಗೆಯುವಿರಾ,

ಭೇದ ಭಾವವ ಬಂಧಿಸುವಿರಾ,

ಭಾವೈಕ್ಯತೆಯ ಬೀಜ ಬಿತ್ತುವಿರಾ?


ದಾಖಲೆ ತೋರಿಸುವೆವು

ನಿರಂಕುಶತೆಯ ತೊರೆಯುವಿರಾ,

ಕಳೆದ ಬದುಕ ಮರಳಿ ಕೈಗಿತ್ತುವಿರಾ,

ಸಮಾನತೆ, ಸ್ವಾತಂತ್ರ್ಯ ನೀಡುವಿರಾ?


Rate this content
Log in

Similar kannada poem from Tragedy