ಅಂತರ್ಯುಧ್ಧ
ಅಂತರ್ಯುಧ್ಧ
ಒಂದೇ ವರ್ಷದ ಹಿಂದೆ
ಅಗಲಿದ ನನ್ನವಳ
ಅಂತರ್ಯುಧ್ದ
ದೊಡ್ಡ ಆಸ್ಪತ್ರೆ ಎಂಬ
ಯುದ್ಧ ಭೂಮಿ
ವೈದ್ಯನೆಂಬ ಕಮಾಂಡರ್
ಔಷದಿಗಳೆಂಬ ಕತ್ತಿಗುರಾಣಿ
ಸಾವಿನೊಂದಿಗೆ ಸತತ
ಸೆಣಸಾಡಿದವಳು ಮೌನ
ವೈದ್ಯರ ಭಾಷೆಯಲ್ಲೇ ಸೋಲಿಸಿ
ಸಿಬ್ಬಂದಿಯಿಂದ ಗುಣಗಾನ
ಉಳಿಸಲು ಹಣ ಕೊಟ್ಟು
ಹೆಣ ಪಡೆದ ದುರ್ದೈವಿಗಳ
ಪಟ್ಟಿಗೆ ನಮ್ಮನ್ನೂ ಸೇರಿಸಿ
ಸತ್ಯವನ್ನು ಒಪ್ಪಲೇ ಬೇಕೆಂದರು
ವಿಧಿಯ ಶಪಿಸಿ ಕುಸಿದೆವು