ಮರೆಯಲಾಗದ ಜೀವ
ಮರೆಯಲಾಗದ ಜೀವ
ಹಾಡೇ ಉಸಿರಾಗಿಸಿಕೊಂಡು
ಕಷ್ಟ ಬಂದಾಗ ನುಂಗಿ ನೋವ
ಅನ್ಯರನು ಎಂದೂ ನೋಯಿಸದೆ
ಸಾರ್ಥಕವಾಯಿತು ಆ ಜೀವ
ಅಸಾಧಾರಣ ಶಾರೀರದಲ್ಲಿ
ಸಂಗೀತ ಶಾರದೆಯ ವಾಸ
ಅದಕಾಗಿ ಮೈಗೂಡಿಸಿಕೊಂಡಿದ್ದು
ಹಲವು ಶಿಸ್ಸ್ತು ಬದ್ಧ ಹವ್ಯಾಸ
ಆಸೆಗಳ ಮುಗಿಲ ಮುಟ್ಟಿದರೂ
ಕಲಿಕೆಯ ಕೂಸೆನ್ನುವ ಭಾವ
ದಣಿವರಿಯದೇ ಹಾಡಿ ಹಾಡಿ
ಬದುಕಿದ ಅಸಾಮಾನ್ಯ ಜೀವ
ಇನ್ನೂ ಎಷ್ಟು ಹಾಡಬೇಕಿತ್ತೋ
ತಿಳಿಸದೇ ಮನದಾಳದ ನೋವ
ಆ ದೇವರಿಗೂ ಅಸೂಯೆ ಇತ್ತೋ
ಏಕಿಂದು ಕಣ್ಮರೆಯಾಯ್ತು ಜೀವ