ಅಂದು ಇಂದು
ಅಂದು ಇಂದು
ಅಂದು
ನನ್ನದೊಂದು ಇತ್ತು ಗುಜರಿ,
ನಾನು ಇರುತ್ತಿದ್ದೆ ದಿನಾ ಅಲ್ಲಿ ಹಾಜರಿ.
ಹಳೇ ನಟ್ಟು, ಬೋಲ್ಟು,
ಕೆಲವೊಮ್ಮೆ ನಾನು ಅಲ್ಲೇ ಹಾಲ್ಟ್ .
ಕಿತ್ತೋದ ಟೈಯರ್, ಸೈಕಲ್ ಪಂಚರ್.
ಇವೆ ನನ್ನ ಪ್ರಪಂಚ.
ನಾನು ಅದರಲ್ಲೇ ಆಗಿದ್ದೆ ಹುಚ್ಚ.
ಇಂದು
ನನ್ನ ಆ ಗುಜರಿ ಇಂದು ನನ್ನದಲ್ಲ,
ಇರುವರು ಯಾರೋ ಹಾಜರಿ, ಅದರಲಿ ನಾನಿಲ್ಲ !
ಹಳೇ ನಟ್ಟು, ಬೋಲ್ಟು ನನ್ನ ಮರೆತಿಲ್ಲಾ,
ಹೊಸ ನಟ್ಟು ಬೋಲ್ಟಿ ಗೆ ನನ್ನ ಪರಿಚಯವಿಲ್ಲಾ.
ಕಿತ್ತೋದ ನನ್ನ ಟೈಯರ್ಯಿಲ್ಲಾ!
ನನ್ನ ಸೈಕಲ್ ಪಂಚರ್ಯಿಲ್ಲಾ!
ಎಲ್ಲಿ ಬಿಸಾಕಿರುವರೋ ಅವುನ್ನೆಲ್ಲಾ !
ಕೊಟ್ಟಿದ್ದರೆ, ನಾನು ತೆಗೆದುಕೊಳ್ಳುತ್ತಿದ್ದೆನಲ್ಲ.
ಮಾಡಿದ ಸಾಲ ತೀರಿಸಲಾಗಲಿಲ್ಲ.
ನನ್ನ ಪ್ರಪಂಚದಲ್ಲಿ ಪರಕಾಯ ಪ್ರವೇಶ ನಡೆದಿದೆಯಲ್ಲ.
ಅವರೆಲ್ಲರಿದ್ದರು ನನ್ನ ಗುಜರಿ ಅನಾಥ ಕಾರಣ
ಅಲ್ಲಿ ನಾನಿಲ್ಲವಲ್ಲ !