ಕಸರತ್ತು
ಕಸರತ್ತು
1 min
24.1K
ದಿನವೂ ಮಾಡುತ್ತಿರುವೆ ನಾ ಕಸರತ್ತು
ಎಲ್ಲಾ ಸಲಕರಣೆಗಳನ್ನ ಎತ್ತಿ ಎತ್ತಿ ಸುಸ್ತಾಯ್ತು
ದಿನಾ ರಾತ್ರಿ ಮಾಡುವೆ ನಾ ಒಪ್ಪತ್ತು
ಬಿಟ್ಟೇ ಬಿಟ್ಟಿರುವೆ ಸಕ್ಕರೆಯ ಚಹಾ ಬಿಸ್ಕತ್ತು
ಆದರೂ ಕರಗಲಿಲ್ಲ ಬೊಜ್ಜು ಒಂದೂ ಸುತ್ತು
ಕೊನೆಗೆ ಸುಮ್ಮನೆ ಕುಳಿತೆ ಎಲ್ಲದರಿಂದ ಬೇಸತ್ತು.